Assembly Session: ಸದನದಲ್ಲಿ ಅಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಯಾರು ಹೆಚ್ಚು ಲೂಟಿಕೋರರು ಅಂತ ಕಾದಾಟ!
Assembly Session: ನಿನ್ನೆ ಸದಾಶಿವನಗರದ ಭಾಷ್ಯಂ ವೃತ್ತದಲ್ಲಿ ವ್ಹೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡುವಾಗ ಡಿಕೆ ಶಿವಕುಮಾರ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ನಡುವೆ ಅತ್ಮೀಯ ಮಾತುಕತೆ ನಡೆದಿತ್ತು. ಅದರೆ ಇಂದು ಸದನದಲ್ಲಿ ಅವರು ಬದ್ಧ ವೈರಿಗಳಂತೆ ಕಾದಾಟಕ್ಕೆ ನಿಂತಿದ್ದರು! ನೀನು ಲಂಚಕೋರ ನಾನು ಲಂಚಕೋರ!!
ಬೆಂಗಳೂರು: ವಿಧಾನಸಭಾ ಅಧಿವೇಶನ ಜಾರಿಯಲ್ಲಿರುವಾಗ ದಿನದ ಕಲಾಪಗಳು ಕೇವಲ ಅರಚಾಟ, ಕೂಗಾಟ, ಆರೋಪ ಮತ್ತು ಪ್ರತ್ಯಾರೋಪ ಮೀಸಲಾದರೆ ಯಾವ ಪುರುಷಾರ್ಥಕ್ಕೆ ಅಧಿವೇಶನ ನಡೆಸಬೇಕು ಅಂತ ಪ್ರಶ್ನೆ ಏಳೋದು ಸಹಜ. ನಮ್ಮ ಪ್ರತಿನಿದಿಗಳು ಅಂದರೆ ಆಡಳಿತ ಮತ್ತು ವಿರೋಧಪಕ್ಷಗಳು ಸದಸ್ಯರು ಹೇಗೆ ಕಿರುಚಾಡುತ್ತಿದ್ದಾರೆ ಅಂತ ನೋಡಿ. ಯಾರ ಮಾತನ್ನಾದರೂ ಕೇಳಿಸಿಕೊಳ್ಳಬಹುದೇ? ಸಭಾಧ್ಯಕ್ಷನ ಸ್ಥಾನದಲ್ಲಿ ಕುಳಿತಿರುವ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರು ಸದಸ್ಯರನ್ನು ಶಾಂತಗೊಳಿಸುವ ವ್ಯರ್ಥ ಪ್ರಯತ್ನ ಮಾಡುತ್ತಾರೆ. ಬಿಜೆಪಿ ನಾಯಕರಾದ ಅಶ್ವಥ್ ನಾರಾಯಣ, ಆರ್ ಅಶೋಕ, ಸುನೀಲ್ ಕುಮಾರ್, ಸಿಸಿ ಪಾಟೀಲ್, ಪ್ರಭು ಚವ್ಹಾಣ್ ಮೊದಲಾದವರೆಲ್ಲ ಸ್ಪೀಕರ್ ಎಡಭಾಗದಿಂದ ಅರಚಿದರೆ, ಬಲಭಾಗದಿಂದ ಡಿಕೆ ಶಿವಕಮಾರ್, ಜಿ ಪರಮೇಶ್ವರ್, ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ ಮತ್ತು ಬೇರೆ ಕೆಲ ಶಾಸಕರು ಅರಚುವುರದಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಸ್ಪರ್ಧೆಗೆ ಬೀಳುತ್ತಾರೆ. ಇವರ ನಡುವೆ ಚರ್ಚೆ ನಡೆಯುತ್ತಿರೋದು ಯಾರು ಹೆಚ್ಚು ಲಂಚಕೋರರು, ಲೂಟಿಕೋರರು ಎಂಬ ವಿಷಯದ ಮೇಲೆ! ನೀನು ಲಂಚಕೋರರ ಪಿತಾಮಹ ಅಂತ ಶಿವಕುಮಾರ್ ಅವರು ಅಶ್ವಥ್ ನಾರಾಯಣರಿಗೆ ಹೇಳಿದ ಬಳಿಕ ಸದನದಲ್ಲಿ ಮಾತಿನ ಕಾಳಗ ಶುರುವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಬಸನಗೌಡ ಯತ್ನಾಳ್ ಪ್ರಸ್ತಾಪಿಸಿದ್ದು ಉತ್ತಮ ಅಂಶವೇ; ಆದರೆ ಮೂದಲಿಸಿದ್ದು ಅಶೋಕ ಮತ್ತು ವಿಜಯೇಂದ್ರರನ್ನು!