ಸದನದಲ್ಲಿ ಚರ್ಚೆ ಮಾಡುವ ಬದಲು ಆಡಳಿತ ಪಕ್ಷ ಪಲಾಯನ ಮಾಡಲು ಪ್ರಯತ್ನಿಸುತ್ತಿದೆ: ಆರ್ ಅಶೋಕ, ವಿಪಕ್ಷ ನಾಯಕ
ವಕ್ಫ್ ಭೂಕಬಳಿಕೆಗೆ ಸಂಬಂಧಿಸಿದಂತೆ ತಾನು ಸವಿಸ್ತಾರವಾಗಿ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಹೇಳಿದ ಅಶೋಕ, ಸರ್ಕಾರದ ಉತ್ತರವನ್ನು ಎದುರುನೋಡುತ್ತಿದ್ದೇವೆ ಎಂದರು. ಮಣಿಪ್ಪಾಡಿ ಅವರ ಹೇಳಿಕೆಗೆ ಆಪಾರ್ಥ ಕಲ್ಪಿಸಿರುವ ಕಾಂಗ್ರೆಸ್ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮೇಲೆ ₹ 150ಕೋಟಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಶೋಕ ಹೇಳಿದರು.
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಇವತ್ತಿನ ಕಾರ್ಯಕಲಾಪಗಳು ಶುರುವಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಸದನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ಆಗಬೇಕಿದೆ, ಮುಡಾ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿಯವರೇ ಸಿಕ್ಹಾಕಿಕೊಂಡಿದ್ದಾರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಚರ್ಚೆಯಾಗಬೇಕಿದೆ, ಅಬಕಾರಿ ₹ 700 ಕೋಟಿ ಅವ್ಯವಹಾರ ವರದಿಯಾಗಿದೆ, ವಕ್ಫ್ ಬೋರ್ಡ್ ಭೂಕಬಳಿಕೆಯಿಂದ ರೈತರು ಕಂಗಾಲಾಗಿದ್ದಾರೆ- ಚರ್ಚೆ ನಡೆಸುವ ಬದಲು ಸರ್ಕಾರ ಪಲಾಯನ ಮಾಡುವ ಹವಣಿಕೆಯಲ್ಲಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ನಾವು 8-10 ತಾಸು ಕೆಲಸ ಮಾಡಿದರೆ ಸಿದ್ದರಾಮಯ್ಯ ಮನೇಲಿ ಕೂತಿದ್ದರು: ಆರ್ ಅಶೋಕ