ದೇವಸ್ಥಾನಕ್ಕೆ ಬಂದ ದರ್ಶನ್ ಪತ್ನಿಯನ್ನು ಸುತ್ತುವರಿದು ಕೇಕೆ ಹಾಕುವುದು ಅಭಿಮಾನವಲ್ಲ

|

Updated on: Oct 30, 2024 | 6:29 PM

ದರ್ಶನ್ ಅವರ ಸಾವಿರಾರು ಅಭಿಮಾನಿಗಳು ಬಳ್ಳಾರಿಯ ಸೆಂಟ್ರಲ್ ಜೈಲು ಮುಂದೆ ನಿಂತು ಅವರು ಹೊರಗಡೆ ಬರುವುದನ್ನು ಅಪ್ಯಾಯತೆ, ತಾಳ್ಮೆ, ಮತ್ತು ಕುತೂಹಲದಿಂದ ಕಾಯುತ್ತಿದ್ದಾರೆ. ದರ್ಶನ್ ಕಂಡ ಕೂಡಲೇ ಅವರು ಚೀರುವುದು, ಕೇಕೆ ಹಾಕುವುದು ಸಹಜವೆನಿಸುತ್ತದೆ. ಅದರೆ, ಅವರ ಪತ್ನಿಯ ಹಿಂದೆ ಓಡುವುದು ಸರಿಯೆನಿಸಲಾರದು.

ಬಳ್ಳಾರಿ: ಇದು ಅಭಿಮಾನವಲ್ಲ ಅತಿರೇಕ. ಗಂಡನಿಗೆ ಮಧ್ಯಂತರ ಬೇಲ್ ಸಿಕ್ಕಿರುವ ಹಿನ್ನೆಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ನಗರದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಅದರೆ, ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಹೋದೆಡೆಯೆಲ್ಲ ದರ್ಶನ್ ಹೆಸರಲ್ಲಿ ಜಯಘೋಷ ಮಾಡುತ್ತ ಕೇಕೆ ಹಾಕುತ್ತಾ ಹಿಂಬಾಲಿಸುತ್ತ್ತಿದ್ದಾರೆ. ಅಭಿಮಾನವನ್ನು ಹೀಗೆ ತೋರಿಸಲಾದೀತೆ? ವಿಜಯಲಕ್ಷ್ಮಿ 5 ತಿಂಗಳಿಂದ ಪ್ರಕ್ಷುಬ್ಧ ಮನಸ್ಥಿತಿಯಲ್ಲಿದ್ದಾರೆ, ಅದನ್ನಾದರೂ ಜನ ಅರ್ಥಮಾಡಿಕೊಳ್ಳಬಾರದೆ? ಇದು ಸಂವೇದನಾ ಹೀನತೆಯ ಪರಮಾವಧಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೇಲ್ ಪಡೆದಿರುವ ದರ್ಶನ್ ಜೈಲಿಂದ ಹೊರಬರುವುದನ್ನು ಕಾಯುತ್ತಿರುವ ಬಳ್ಳಾರಿ ಅಭಿಮಾನಿಗಳು

Follow us on