AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

ಮದನ್​ ಕುಮಾರ್​
|

Updated on: May 13, 2026 | 2:47 PM

Share

ನಟ ದಿಲೀಪ್ ರಾಜ್ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯ ಸುದ್ದಿ ತಿಳಿದಾಗ ನಿರ್ದೇಶಕ ಎಸ್. ನಾರಾಯಣ್ ಅವರು ನಂಬಲೇ ಇಲ್ಲ. ಆ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿಲೀಪ್ ರಾಜ್ ಅವರ ಅಂತಿಮ ದರ್ಶನ ಪಡೆದ ಬಳಿಕ ಎಸ್. ನಾರಾಯಣ್ ಅವರು ಮಾತನಾಡಿದರು.

ಧಾರಾವಾಹಿ ಮತ್ತು ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ ದಿಲೀಪ್ ರಾಜ್ (Dileep Raj) ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯ ಸುದ್ದಿ ತಿಳಿದಾಗ ನಿರ್ದೇಶಕ ಎಸ್. ನಾರಾಯಣ್ ಅವರು ನಂಬಲೇ ಇಲ್ಲ. ಆ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿಲೀಪ್ ರಾಜ್ ಅವರ ಅಂತಿಮ ದರ್ಶನ ಪಡೆದ ಬಳಿಕ ಎಸ್. ನಾರಾಯಣ್ ಅವರು ಮಾತನಾಡಿದರು. ‘ಇಂದು ನನಗೆ ಶೂಟಿಂಗ್ ಇತ್ತು. ಮ್ಯಾನೇಜರ್ ಕರೆ ಮಾಡಿ ಶೂಟಿಂಗ್ ಕ್ಯಾನ್ಸಲ್ ಎಂದರು. ಯಾಕೆ ಅಂತ ಕೇಳಿದ್ದಕ್ಕೆ ದಿಲೀಪ್ ಹೋದರು ಅಂತ ಹೇಳಿದರು. ನಾನು ಅವರಿಗೆ ಬೈಯ್ದು ಫೋನ್ ಇಟ್ಟೆ. ಅಪ್ಪು ಅವರು ಹೋದಾಗ ನಾನು ನಂಬಿರಲಿಲ್ಲ. ಆಸ್ಪತ್ರೆಗೆ ಹೋಗಿ ಅವರ ಪಾರ್ಥೀವ ಶರೀರ ನೋಡಿದ ಮೇಲೆಯೇ ನಾನು ನಂಬಿದ್ದು. ದಿಲೀಪ್ ಕೂಡ ಹಾಗೆಯೇ ಆರೋಗ್ಯವಾಗಿ ಇದ್ದರು. ಅಂಥ ಮನುಷ್ಯನಿಗೆ ಸಾವು ಹೇಗೆ ಬರುತ್ತದೆ? ಅವರಿಗೆ ಯಾವುದೇ ದುರಭ್ಯಾಸ ಇರಲಿಲ್ಲ’ ಎಂದು ಎಸ್. ನಾರಾಯಣ್ (S Narayan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More