ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುವ ವೇಳೆ ರಸ್ತೆ ಪಕ್ಕದ ಅಂಗಡಿಯಲ್ಲಿ ಟೀ ಕುಡಿದ ಸಚಿನ್‌ ತೆಂಡೂಲ್ಕರ್‌: ವಿಡಿಯೋ ವೈರಲ್​
ಬೆಳಗಾವಿಯಲ್ಲಿ ರಸ್ತೆ ಬದಿ ಚಹಾ ಸವಿದ ಸಚಿನ್‌ ತೆಂಡೂಲ್ಕರ್‌

ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುವ ವೇಳೆ ರಸ್ತೆ ಪಕ್ಕದ ಅಂಗಡಿಯಲ್ಲಿ ಟೀ ಕುಡಿದ ಸಚಿನ್‌ ತೆಂಡೂಲ್ಕರ್‌: ವಿಡಿಯೋ ವೈರಲ್​

| Updated By: ವಿವೇಕ ಬಿರಾದಾರ

Updated on: Oct 31, 2022 | 6:13 PM

ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಇಂದು (ಅ.31) ಬೆಳಗಾವಿಯ ಸನೀಹದ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದಿದ್ದಾರೆ.

ಕ್ರಿಕೇಟ್​​ನ ದಿಗ್ಗಜ, ಕ್ರಿಕೇಟ್​ನ ದೇವರು ಎಂದೇ ಕ್ಯಾತಿಯಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ (Sachin Tendulkar) ಇಂದು (ಅ.31) ಬೆಳಗಾವಿಯ ಸನೀಹದ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 (ಎ) ಮೇಲಿರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್​ನಲ್ಲಿ ಚಹಾ ಸವಿದಿದ್ದಾರೆ. ಹಾಗೇ ವೈಜು ನಿತೂರ್ಕರ್ ಜತೆಗೆ ಸೇಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾರೆ.