ಅಯೋಧ್ಯೆ ರಾಮ ಮಂದಿರಕ್ಕೆ ಸದ್ಗುರು ಜಗ್ಗಿ ವಾಸುದೇವ್ ಭೇಟಿ, ಪೇಜಾವರ ಶ್ರೀ ಜೊತೆ ಸಮಾಲೋಚನೆ

ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನಿನ್ನೆ ಸೋಮವಾರ ಈಶಾ ಫೌಂಡೇಶನ್ ಸ್ಥಾಪಕ, ಧಾರ್ಮಿಕ ಚಿಂತಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಭೇಟಿ ನೀಡಿದ್ದರು. ರಾಮಲಲ್ಲಾನ ದರ್ಶನ ಕೈಗೊಂಡು ಕೆಲಕಾಲ ದೇವಾಲಯದ ಒಳಾಂಗಣದಲ್ಲಿ ಧ್ಯಾನಾಸಕ್ತರಾದರು. ರಾಮನಾಮ ಭಜಿಸಿದರು.

ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನಿನ್ನೆ ಸೋಮವಾರ ಈಶಾ ಫೌಂಡೇಶನ್ ಸ್ಥಾಪಕ, ಧಾರ್ಮಿಕ ಚಿಂತಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev, founder of Isha Foundation)​ ಭೇಟಿ ನೀಡಿದ್ದರು. ರಾಮಲಲ್ಲಾನ ದರ್ಶನ ಕೈಗೊಂಡು ಕೆಲಕಾಲ ದೇವಾಲಯದ ಒಳಾಂಗಣದಲ್ಲಿ ಧ್ಯಾನಾಸಕ್ತರಾದರು. ರಾಮನಾಮ ಭಜಿಸಿದರು.

ಇದೇ ವೇಳೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು (Pejawar Mutt Seer Vishwaprasanna Tirtha Swamiji) ಭೇಟಿಯಾದರು. ಸದ್ಯ 48 ದಿನಗಳ ಮಂಡಲ ಪೂಜೆಯಲ್ಲಿ ನಿರತರಾಗಿರುವ ಪೇಜಾವರ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು.

Also Read: ಅಯೋಧ್ಯೆಯಲ್ಲಿ ಬಾಲರಾಮನಿಗೆ ರಜತ ಕಲಶ ಅಭಿಷೇಕ ಸೇವೆ ಮಾಡಿಸಬೇಕಾ? ಹಾಗಾದರೆ ಈ ಉದಾತ್ತ ಸಮಾಜ ಕಾರ್ಯ ನಡೆಸಿಕೊಡಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us