AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ 10 ವರ್ಷದಲ್ಲಿ ರಚಿತಾಗಿಂತ ಸುಂದರ ನಟಿಯನ್ನು ನಾನು ನೋಡಿಲ್ಲ’: ಸಾಧು ಕೋಕಿಲ

‘ಈ 10 ವರ್ಷದಲ್ಲಿ ರಚಿತಾಗಿಂತ ಸುಂದರ ನಟಿಯನ್ನು ನಾನು ನೋಡಿಲ್ಲ’: ಸಾಧು ಕೋಕಿಲ

ಮದನ್​ ಕುಮಾರ್​
|

Updated on: Aug 19, 2024 | 11:04 PM

Share

2011ರಲ್ಲಿ ಬಂದ ‘ಸಂಜು ವೆಡ್ಸ್​ ಗೀತಾ’ ಸಿನಿಮಾಗೆ ರಮ್ಯಾ ನಾಯಕಿ ಆಗಿದ್ದರು. ಈಗ ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ರಚಿತಾ ರಾಮ್​ ಅವರು ಹೀರೋಯಿನ್​. ಇಬ್ಬರ ನಡುವಿನ ಹೋಲಿಕೆ ಬಗ್ಗೆ ಸಾಧು ಕೋಕಿಲ ಅವರು ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಒಂದಷ್ಟು ವಿಚಾರಗಳನ್ನು ಹೊಂಚಿಕೊಂಡಿದ್ದಾರೆ. ಸಾಧು ಕೋಕಿಲ ಮಾತನಾಡಿದ ವಿಡಿಯೋ ಇಲ್ಲಿದೆ..

ರಚಿತಾ ರಾಮ್​, ಶ್ರೀನಗರ ಕಿಟ್ಟಿ, ಸಾಧು ಕೋಕಿಲ ಮುಂತಾದ ಕಲಾವಿದರು ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಾಧು ಕೋಕಿಲ ಅವರು ಮಾತನಾಡಿದ್ದಾರೆ. ಈ ಚಿತ್ರಕ್ಕೆ ನಾಗಶೇಖರ್​ ನಿರ್ದೇಶನ ಮಾಡುತ್ತಿದ್ದಾರೆ. ‘ರಮ್ಯಾ ಅವರು ಚೆನ್ನಾಗಿ ಇದ್ದರು. ಹಾಗಾಗಿ ಅವರನ್ನು ಚೆನ್ನಾಗಿ ತೋರಿಸಲಾಗಿತ್ತು. ಇತ್ತೀಚಿನ 8ರಿಂದ 10 ವರ್ಷಗಳಲ್ಲಿ ರಚಿತಾ ರಾಮ್​ ಅವರಿಗಿಂತಲೂ ಬ್ಯೂಟಿಫುಲ್​ ಆದ ನಟಿಯನ್ನು ನಾನು ನೋಡಿಲ್ಲ. ಹಾಗಾಗಿ ಅವರನ್ನು ಕೂಡ ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ’ ಎಂದು ಸಾಧು ಕೋಕಿಲ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More