ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಹಾಸನ ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಸಕಲೇಶಪುರದ ಕಿರುಹುಣಸೆ ಗ್ರಾಮದಲ್ಲಿ ಗಂಡಾನೆ ಮತ್ತು ಹೆಣ್ಣಾನೆ ಗ್ರಾಮದ ರಸ್ತೆಯಲ್ಲೇ ಹೆಜ್ಜೆಹಾಕಿ ಜನರಲ್ಲಿ ಭೀತಿ ಹುಟ್ಟಿಸಿವೆ. ಕಳೆದ 10-15 ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬರುತ್ತಿವೆ ಎನ್ನಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಹಾಸನ, ಜೂನ್ 18: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ಕಾಡಾನೆಗಳು ಪರೇಡ್ ನಡೆಸಿದ್ದರಿಂದ ಊರಿನ ಜನ ಬೆಚ್ಚಿಬೀಳುವಂತಾಗಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದ ಒಂದು ಸಲಗ ಹಾಗೂ ಮತ್ತೊಂದು ಹೆಣ್ಣಾನೆ ‘ಗಜ’ಗಾಂಭೀರ್ಯದ ಹೆಜ್ಜೆಹಾಕಿವೆ. ಕಳೆದ ಹದಿನೈದು ದಿನಗಳಿಂದ ಇದೇ ಪ್ರದೇಶದಲ್ಲಿ ಕಾಡಾನೆಗಳು ಓಡಾಡುತ್ತಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬೇಟಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ