ಸಲಗಕ್ಕೆ ಫ್ಯಾನ್ಸ್ ಜೈಕಾರ; ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಏನ್ ಹೇಳಿದ್ರು?
ದುನಿಯಾ ವಿಜಯ್, ಡಾಲಿ ಧನಂಜಯ ಮಾತ್ರವಲ್ಲದೇ ಎಲ್ಲರ ಪಾತ್ರಗಳನ್ನೂ ಜನರು ಮೆಚ್ಚಿಕೊಂಡಿದ್ದಾರೆ. ‘ಸಲಗ’ ಮೂಲಕ ನಿರ್ದೇಶಕನಾಗಿಯೂ ವಿಜಯ್ಗೆ ಗೆಲುವು ಗ್ಯಾರಂಟಿ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.
ಬಹಳ ಅದ್ದೂರಿಯಾಗಿ ‘ಸಲಗ’ ಸಿನಿಮಾ ತೆರೆಕಂಡಿದೆ. ಈ ಚಿತ್ರಕ್ಕಾಗಿ ಬಹಳ ದಿನಗಳಿಂದ ಕಾದಿದ್ದ ಅಭಿಮಾನಿಗಳು ಮೊದಲ ದಿನ ಮೊದಲ ಶೋ ನೋಡಿ ಎಂಜಾಯ್ ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ದುನಿಯಾ ವಿಜಯ್ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಈ ಚಿತ್ರ 100 ದಿನ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಅಭಿಮಾನಿಗಳು ಭವಿಷ್ಯ ನಡಿಯುತ್ತಿದ್ದಾರೆ.
ದುನಿಯಾ ವಿಜಯ್ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಡಾಲಿ ಧನಂಜಯ, ಚೆನ್ನಕೇಶವ, ಕಾಕ್ರೋಚ್ ಸುಧಿ, ಶ್ರೇಷ್ಠ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಮಾಸ್ತಿ ಡೈಲಾಗ್ ಸಿನಿಪ್ರಿಯರ ಮನಗೆದ್ದಿದೆ.
ಇದನ್ನೂ ಓದಿ:
Salaga Movie Review: ‘ಸಲಗ’ ತುಂಬಾ ರಗಡ್ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್ಗೆ ಮಾಸ್ ಪ್ರೇಕ್ಷಕರೇ ಟಾರ್ಗೆಟ್
‘ಚರಂಡಿ ಕ್ಲೀನ್ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ
Published on: Oct 14, 2021 05:19 PM