‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವ ಹಂಚಿಕೊಂಡ ಸಂಗೀತ ಭಟ್, ಸ್ಪರ್ಧಿಗಳೊಂದಿಗಿನ ಉತ್ತಮ ಬಾಂಧವ್ಯವನ್ನು ಸ್ಮರಿಸಿದ್ದಾರೆ. "ಅತ್ತಿಗೆ" ಮತ್ತು "ಅನ್ನಪೂರ್ಣೇಶ್ವರಿ" ಎಂದು ಮನೆಮಂದಿ ಪ್ರೀತಿಯಿಂದ ಕರೆಯುತ್ತಿದ್ದಾಗ ಅದು ನೀಡಿದ ಸಂತೋಷವನ್ನು ವಿವರಿಸಿದ್ದಾರೆ. ಸಂಬಂಧಗಳ ಮಹತ್ವ ಮತ್ತು ಪ್ರೀತಿಯ ಬಂಧಗಳು ತಮ್ಮ ಬಿಗ್ ಬಾಸ್ ಪ್ರಯಾಣದ ಪ್ರಮುಖ ಅಂಶ ಎಂದು ಹೇಳಿದ್ದಾರೆ.
ಅನಾರೋಗ್ಯ ಕಾರಣದಿಂದ ಸಂಗೀತಾ ಭಟ್ ಎಲಿಮಿನೇಟ್ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಜರ್ನಿ ಅನುಭವ ಬಿಚ್ಚಿಟ್ಟಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮನ್ನು ಅತ್ತಿಗೆ, ಅಕ್ಕ ಎಂದು ಕರೆಯುತ್ತಿದ್ದಾಗ ಅವರಿಗೆ ವಿಶೇಷ ಗೌರವ ಮತ್ತು ಪ್ರೀತಿ ಎನಿಸಿತ್ತಂತೆ. ‘ಯೂನಿವರ್ಸಲ್ ಅತ್ತಿಗೆ ಎಂಬ ಪಟ್ಟ ದೊರೆತಿತ್ತು. ಜಗದೀಶ್ ಮತ್ತು ತಾಂಡವ್ ಸೇರಿದಂತೆ ಹಲವರು ತಮ್ಮನ್ನು ಅತ್ತಿಗೆ ಎಂದು ಕರೆಯುತ್ತಿದ್ದರು. ಅಮ್ಮ ಎಂದು ಕರೆದಾಗ ಕರುಳು ಚುರುಕ್ ಎನ್ನುವಂತೆ, ಅತ್ತಿಗೆ ಎಂದು ಕರೆಯುವಾಗ ಅವರಿಗೇನೋ ಬೇಕು, ನಾನು ಹೋಗಿ ನೋಡಬೇಕು ಎಂಬ ಭಾವನೆ ಬರುತ್ತಿತ್ತು’ ಎಂದು ಸಂಗೀತ ಭಟ್ ಹೇಳಿದ್ದಾರೆ.
ಅಲ್ಲದೆ, ಅಡುಗೆಮನೆಯಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ‘ಅನ್ನಪೂರ್ಣೇಶ್ವರಿ’ ಎಂಬ ಪ್ರೀತಿಯ ಅಡ್ಡಹೆಸರು ಕೂಡ ಸಿಕ್ಕಿತ್ತು. ಈ ಎಲ್ಲಾ ಸಂಬಂಧಗಳು ಮತ್ತು ನೆನಪುಗಳನ್ನು ಹೊರಗೆ ಕೊಂಡೊಯ್ಯಲು ತಮಗೆ ಖುಷಿಯಿದೆ ಎಂದು ಸಂಗೀತ ಭಟ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

