ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ನಟಿ ಸಂಗೀತಾ ಭಟ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯೊಳಗೆ ಇದ್ದಾಗ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಪ್ಯಾನಿಕ್ ಅಟ್ಯಾಕ್ ಆಗಿದ್ದರಿಂದ ಅವರಿಗೆ ಬಹಳ ತೊಂದರೆ ಆಗಿತ್ತು. ಆ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಟಿ ಸಂಗೀತಾ ಭಟ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯೊಳಗೆ ಇದ್ದಾಗ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಪ್ಯಾನಿಕ್ ಅಟ್ಯಾಕ್ ಆಗಿದ್ದರಿಂದ ಅವರಿಗೆ ಬಹಳ ತೊಂದರೆ ಆಗಿತ್ತು. ಆ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಬೇಗ ಹೊರಗೆ ಬಂದಿದ್ದಕ್ಕೆ ಬೇಸರ ಇಲ್ಲ. ಇನ್ನೂ ಅಲ್ಲೇ ಇದ್ದಿದ್ದರೆ ನನ್ನ ಮಾನಸಿಕ ಆರೋಗ್ಯ ಹಾಳಾಗುತ್ತಿತ್ತು. ಅದು ನನ್ನ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದಿತ್ತು. ಒತ್ತಡದ ಕಾರಣದಿಂದ ಪ್ಯಾನಿಕ್ ಅಟ್ಯಾಕ್ ಆಗುವುದು ಸಹಜ ಎಂಬಂತೆ ಆಗಿದೆ. ಯಾವುದೇ ಸ್ಪರ್ಧಿಗಳಿಂದ ನನಗೆ ತೊಂದರೆ ಆಗಿರಲಿಲ್ಲ. ನನಗೆ ಪ್ಯಾನಿಕ್ ಅಟ್ಯಾಕ್ ಆಗಿದ್ದರಿಂದ ತೊಂದರೆ ಆಯಿತು. ಈ ಮೊದಲು ನನಗೆ ಇಂಥ ಅನುಭವ ಆಗಿರಲಿಲ್ಲ’ ಎಂದು ಸಂಗೀತಾ ಭಟ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
