ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಮುಗಿದ ಬಳಿಕ ಸ್ಪರ್ಧಿಗಳೆಲ್ಲರೂ ಕಿಚ್ಚ ಸುದೀಪ್ ಜೊತೆ ಪಾರ್ಟಿ ಮಾಡಿದ್ದರು. ಅಲ್ಲಿ ನಡೆದ ಮಾತುಕಥೆ ಬಗ್ಗೆ ಸತೀಶ್ ಅವರು ಮಾತನಾಡಿದ್ದಾರೆ. ಸತೀಶ್ ಧರಿಸುವ ಬಟ್ಟೆ, ಕೂಲಿಂಗ್ ಕ್ಲಾಸ್ ಇತ್ಯಾದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಫಿನಾಲೆ ಬಳಿಕ ಸ್ಪರ್ಧಿಗಳೆಲ್ಲರೂ ಕಿಚ್ಚ ಸುದೀಪ್ ಜೊತೆ ಪಾರ್ಟಿ ಮಾಡಿದ್ದರು. ಅಲ್ಲಿ ನಡೆದ ಮಾತುಕಥೆ ಬಗ್ಗೆ ಸತೀಶ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಸತೀಶ್ ಧರಿಸುವ ಬಟ್ಟೆ, ಕೂಲಿಂಗ್ ಗ್ಲಾಸ್ ಇತ್ಯಾದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತದೆ. ಅವುಗಳ ಬೆಲೆ ದುಬಾರಿ ಎಂದು ಅವರೇ ಹೇಳಿಕೊಳ್ಳುತ್ತಾರೆ. ‘18 ಸಲ ನನ್ನ ಗ್ಲಾಸ್ ಬಗ್ಗೆ ಚರ್ಚೆ ಆಯಿತು. ಈ ಕೂಲಿಂಗ್ ಗ್ಲಾಸ್ ಅನ್ನು ತುಕಾಲಿ ಸಂತುಗೆ ಗಿಫ್ಟ್ ಕೊಡು ಅಂತ ಸುದೀಪ್ ಸರ್ (Kichcha Sudeep) ಹೇಳಿದರು. ಆದರೆ ನಾನು ಕೊಡಲ್ಲ ಅಂದೆ. ಇದು ಹೊಸ ಗ್ಲಾಸ್, ಹಾಗಾಗಿ ಕೊಡಲ್ಲ ಅಂತ ಹೇಳಿದೆ’ ಎಂದಿದ್ದಾರೆ ಸತೀಶ್. ತಮ್ಮಿಂದಾಗಿ ಎಲ್ಲರೂ ಫೇಮಸ್ ಆಗುತ್ತಿದ್ದಾರೆ ಎಂಬುದು ಸತೀಶ್ (Satish Cadaboms) ಅಭಿಪ್ರಾಯ. ಆ ಬಗ್ಗೆ ಕೂಡ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
