ಶಾಸಕ ಲಕ್ಷ್ಮಣ ಸವದಿಗೆ ಪ್ರಾಮುಖ್ಯತೆ ನೀಡದ ವಿಷಯವನ್ನು ತಳ್ಳಿಹಾಕಿದ ಸಚಿವ ಸತೀಶ್ ಜಾರಕಿಹೊಳಿ

|

Updated on: Mar 26, 2024 | 6:50 PM

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಬಳಿ ಹಾಕಿರುವ ಪೋಸ್ಟರ್ ಗಳಲ್ಲಿ ಲಕ್ಷ್ಮಣ್ ಸವದಿ ಅವರ ಪೋಟೋ ಇಲ್ಲದ ಸಂಗತಿಯನ್ನು ಸತೀಶ್ ಅವರ ಗಮನಕ್ಕೆ ತಂದಾಗ, ಜಿಲ್ಲಾಧ್ಯಕ್ಷರನ್ನು ಕೇಳಬೇಕು, ತಾವು ಸಹ ಫೋಟೋ ಇಲ್ಲದ ಅಂಶವನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದಿರುವುದಾಗಿ ಹೇಳಿದರು.

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಕಣಕ್ಕಿಳಿಸಿರುವ ಸಚಿವರಾದ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕುಡಿಗಳ ಯಶಸ್ಸಿಗಾಗಿ ಉರಿಬಿಸಿಲಲ್ಲಿ ದಣಿವರಿಯದೆ ಓಡಾಡುತ್ತಿದ್ದಾರೆ. ಇಂದು ಅವರಬ್ಬರೂ ಬೆಳಗಾವಿಯಲ್ಲಿದ್ದರು. ಹೆಬ್ಬಾಳ್ಕರ್ ಮಗ ಮೃಣಾಲ್ ಗಾಗಿ (Mrinal) ಸತೀಶ್ ಮತ್ತು ಪ್ರಿಯಾಂಕಾ ಜಾರಿಕಿಹೊಳಿಗಾಗಿ (Priyanka Jarkiholi) ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರ ಮಾಡುವ ಬಗ್ಗೆ ಸಚಿವರ ನಡುವೆ ಒಪ್ಪಂದವಾದಂತಿದೆ. ಸರಿ ಅದು ಬಿಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸತೀಶ್, ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಪ್ರಾಮುಖ್ಯ ನೀಡದ ಬಗ್ಗೆ ಕೇಳಿಬರುತ್ತಿರುವ ಆರೋಪವನ್ನು ತಳ್ಳಿಹಾಕಿದರು. ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿಕೊಡಬೇಕು ಅಂತಿಲ್ಲ, ಎಲ್ಲರೂ ಕೆಲಸ ಮಾಡಬೇಕು, ಅದಕ್ಕೂ ಮುಖ್ಯ ಸಂಗತಿಯೆಂದರೆ, ವರಿಷ್ಠರು ಇನ್ನೂ ಉಸ್ತುವಾರಿಗಳನ್ನು ನೇಮಕ ಮಾಡಿಲ್ಲ ಎಂದು ಹೇಳಿದರು.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಬಳಿ ಹಾಕಿರುವ ಪೋಸ್ಟರ್ ಗಳಲ್ಲಿ ಲಕ್ಷ್ಮಣ್ ಸವದಿ ಅವರ ಪೋಟೋ ಇಲ್ಲದ ಸಂಗತಿಯನ್ನು ಅವರ ಗಮನಕ್ಕೆ ತಂದಾಗ, ಜಿಲ್ಲಾಧ್ಯಕ್ಷರನ್ನು ಕೇಳಬೇಕು, ತಾವು ಸಹ ಫೋಟೋ ಇಲ್ಲದ ಅಂಶವನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದಿರುವುದಾಗಿ ಹೇಳಿದರು. ಲೋಕಸಭಾ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಅವರು, ನಮ್ಮೆಲ್ಲರ ಧ್ಯಾನ ಮತ್ತು ಗಮನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದರ ಮೇಲೆ ಕೇಂದ್ರೀಕೃತವಾಗಿದೆ, ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಗನಿಗೆ ಟಿಕೆಟ್ ಸಿಗುವ ಸಂತಸದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು!