ಮೇಕಪ್ ಮ್ಯಾನ್ ಮಹೇಶ್ ಜತೆ ನಟಿ ಸವಿ ಮಾದಪ್ಪ ಕೊನೆಯ ಮಾತು
ಸಣ್ಣ ವಯಸ್ಸಿಗೆ ಅವರು ಎಲ್ಲರನ್ನೂ ಬಿಟ್ಟು ತೆರಳಿರುವುದು ಅವರ ಕುಟುಂಬ ಹಾಗೂ ಆಪ್ತರಿಗೆ ನಿಜಕ್ಕೂ ಶಾಕ್ ನೀಡಿದೆ. ಸವಿ ಮಾದಪ್ಪಗೆ ಕಳೆದ ಒಂದು ವರ್ಷದಿಂದ ಮೇಕಪ್ಮ್ಯಾನ್ ಆಗಿದ್ದ ಮಹೇಶ್ ಪೊಲೀಸರ ಬಳಿ ಹೇಳಿಕೆ ದಾಖಲು ಮಾಡಿದ್ದಾರೆ. ಕೊನೆಯದಾಗಿ ನಟಿ ಮಾತನಾಡಿದ್ದು, ಇವರ ಜತೆಗೆ ಎನ್ನಲಾಗಿದೆ.
‘ಚೌಕಟ್ಟು’, ‘ಫನ್’ ಸಿನಿಮಾದಲ್ಲಿ ನಟಿಸಿದ್ದ ಸವಿ ಮಾದಪ್ಪ ಅವರು ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ ವಯಸ್ಸಿಗೆ ಅವರು ಎಲ್ಲರನ್ನೂ ಬಿಟ್ಟು ತೆರಳಿರುವುದು ಅವರ ಕುಟುಂಬ ಹಾಗೂ ಆಪ್ತರಿಗೆ ನಿಜಕ್ಕೂ ಶಾಕ್ ನೀಡಿದೆ. ಸವಿ ಮಾದಪ್ಪಗೆ ಕಳೆದ ಒಂದು ವರ್ಷದಿಂದ ಮೇಕಪ್ಮ್ಯಾನ್ ಆಗಿದ್ದ ಮಹೇಶ್ ಪೊಲೀಸರ ಬಳಿ ಹೇಳಿಕೆ ದಾಖಲು ಮಾಡಿದ್ದಾರೆ. ಕೊನೆಯದಾಗಿ ನಟಿ ಮಾತನಾಡಿದ್ದು, ಇವರ ಜತೆಗೆ ಎನ್ನಲಾಗಿದೆ.
ಬುಧವಾರ (ಸೆಪ್ಟೆಂಬರ್ 29) ಸವಿ ಅವರು ಕೆಲವು ಪೋಸ್ಟ್ಗಳನ್ನು ಹಾಕಿದ್ದರು. ‘ಯಾರನ್ನೂ ಕೀಳಾಗಿ ಕಾಣಬೇಡಿ. ನಗುತ್ತಾ ಇರುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವಿರುತ್ತದೆ, ಆ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ’ ಎಂದು ಸವಿ ಬರೆದುಕೊಂಡಿದ್ದರು. ಮತ್ತೊಂದು ಪೋಸ್ಟ್ನಲ್ಲಿ ತಮ್ಮದೇ ಫೋಟೋ ಹಾಕಿ ‘happiness, Sadness, ’ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇದರ ಜತೆಗೆ ಗೆಳೆಯರು ಹಾಗೂ ಸಹೋದರರ ಫೋಟೋ ಹಾಕಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಸಆತ್ಮಹತ್ಯೆ ಮಾಡಿಕೊಂಡ ನಟಿ ಸವಿ ಮಾದಪ್ಪ ಡೆತ್ ನೋಟ್ ಪತ್ತೆ; ಎಲ್ಲರಲ್ಲೂ ಕ್ಷಮೆ ಕೇಳಿದ್ದೇಕೆ?