ಬೆಳಗಾವಿ, ಸೆ.26: ಜಲಾವೃತವಾದ ರಸ್ತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಶಾಲಾ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಘಟನೆ ಬೆಳಗಾವಿ
(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಸಂಜೆ ವೇಳೆ ನಡೆದಿದೆ. ಹುಕ್ಕೇರಿ ತಾಲೂಕಿನ ಹಲವೆಡೆ ಸಂಜೆ ವೇಳೆ ಧಾರಾಕಾರ ಮಳೆ ಸುರಿದಿದ್ದು, ಧಾರಾಕಾರ ಮಳೆಯಿಂದ ಎಲಿಮುನ್ನೋಳಿಯಲ್ಲಿ ರಸ್ತೆಗೆ ನೀರು ನುಗ್ಗಿತ್ತು. ರಸ್ತೆ ಜಲಾವೃತಗೊಂಡಿದ್ದರು 20ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದ ಶಾಲಾ ಬಸ್ ಚಲಾಯಿಸಿ ಚಾಲಕ ದುಸ್ಸಾಹಸ ಮೆರೆದಿದ್ದ. ಅದೃಷ್ಟವಶಾತ್ ಅನಾಹುತ ತಪ್ಪಿದ್ದು, ಗ್ರಾಮಸ್ಥರು ಚಾಲಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಇನ್ನು ಚಾಲಕನ ದುಸ್ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Tue, 26 September 23