2nd PU exams get underway: ವಿದ್ಯಾರ್ಥಿ ಬದುಕಿನ ಪ್ರಮುಖ ಹಂತ, ಮಕ್ಕಳ ಸತ್ವಪರೀಕ್ಷೆ, ಪಾಲಕರಲ್ಲಿ ದುಗುಡ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2023 | 11:00 AM

ವರ್ಷವಿಡೀ ತರಗತಿ, ಟ್ಯೂಷನ್ ಮೊದಲಾದವುಗಳನ್ನು ಅಟೆಂಡ್ ಮಾಡಿ ಪರೀಕ್ಷೆಗೆ ಸಿದ್ಧರಾಗಿರುವ ಮಕ್ಕಳಿಗೆ ಈಗ ಸತ್ವಪರೀಕ್ಷೆಯ ಸಮಯ.

ಬೆಂಗಳೂರು: ವಿದ್ಯಾರ್ಥಿಗಳ ಬದುಕಿನಲ್ಲಿ ದ್ವಿತೀಯ ಪಿಯು (Second PU) ಒಂದು ಪ್ರಮುಖ ಘಟ್ಟ. ಈ ಹಂತದ ಪರೀಕ್ಷೆಗಳನ್ನು ಪಾಸು ಮಾಡಿದ ಬಳಿಕ ಅವರು ವೃತ್ತಿಪರ ಕೋರ್ಸ್ (professional courses) ಅಥವಾ ಅವರ ಆಸಕ್ತಿಯ ವ್ಯಾಸಂಗ ಮಾಡಲು ಹೋಗುತ್ತಾರೆ. ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭಗೊಂಡಿವೆ. ವರ್ಷವಿಡೀ ತರಗತಿ, ಟ್ಯೂಷನ್ ಮೊದಲಾದವುಗಳನ್ನು ಅಟೆಂಡ್ ಮಾಡಿ ಪರೀಕ್ಷೆಗೆ ಸಿದ್ಧರಾಗಿರುವ ಮಕ್ಕಳಿಗೆ ಸತ್ವಪರೀಕ್ಷೆಯ ಸಮಯ. ಪಿಯು ಬೋರ್ಡ್ (PU Board) ನೀಡಿರುವ ಮಾಹಿತಿ ಪ್ರಕಾರ ರಾಜ್ಯದ 1,109 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯತ್ತಿವೆ ಮತ್ತು ಮಾರ್ಚ್ 29 ರಂದು ಮುಕ್ತಾಯಗೊಳ್ಳಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ