ಸ್ಪಷ್ಟೀಕರಣ ಕೇಳಿ ಬಿಲ್​ಗಳನ್ನು ವಾಪಸ್ಸು ಕಳಿಸುವುದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ: ಅರ್ ಅಶೋಕ

ಸ್ಪಷ್ಟೀಕರಣ ಕೇಳಿ ಬಿಲ್​ಗಳನ್ನು ವಾಪಸ್ಸು ಕಳಿಸುವುದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ: ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 24, 2024 | 12:37 PM

ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸ್ಥಾನದಿಂದ ಕೆಳಗಿಳಿಸಿದರೆ, ಆ ಹುದ್ದೆ ಗಾಗಿ ಡಿಸಿಎಂ ಡಿಕೆ ಶಿವಕುಮಾರ್, ಹಿರಿಯ ಸಚಿವರಾದ ಕೆಜೆ ಜಾರ್ಜ್, ಸತೀಶ್ ಜಾರಕಿಹೊಳಿ, ಜಿ ಪರಮೇಶ್ವರ್ ಮತ್ತು ಜಮೀರ್ ಅಹ್ಮದ್ ಮೊದಲಾದವರ ನಡುವೆ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಿದೆ ಎಂದು ಅಶೋಕ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ರಾಜ್ಯಪಾಲರು ಅನುಮೋದನೆಗೆ ಕಳಿಸಿದ್ದ ಬಿಲ್ ಗಳನ್ನು ವಾಪಸ್ಸು ಮಾಡಿದ್ದಕ್ಕೆ ಸರ್ಕಾರದ ನಿರ್ಲಕ್ಷ್ಯತನ ಕಾರಣವೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ ಎಂದರು. ಸರ್ಕಾರ ಬಿಲ್​ಗಳನ್ನು ಸರ್ಕಾರಕ್ಕೆ ಕಳಿಸಿದ ಬಳಿಕ ಸಾರ್ವಜನಿಕರು ಅವುಗಳ ಬಗ್ಗೆ ಆಕ್ಷೇಪಣೆ ಮತ್ತು ದೂರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಿರುತ್ತ್ತಾರೆ. ಆ ಆಕ್ಷೇಪಣೆಗಳ ಆಧಾರದಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಸ್ಪಷ್ಟೀಕರಣಗಳನ್ನು ಕೇಳಿರುತ್ತಾರೆ. ಸರ್ಕಾರ ಮುಖ್ಯ ಕಾರ್ಯದರ್ಶಿ ಮತ್ತು ಬೇರೆ ಅಧಿಕಾರಿಗಳು ರಾಜ ಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮಾಹಿತಿ ನೀಡಿ ಗೊಂದಲಗಳನ್ನು ನಿವಾರಿಸಿದರೆ ಅವರು ಅನುಮೋದನೆ ನೀಡುತ್ತಾರೆ ಎಂದು ಅಶೋಕ ಹೇಳಿದರು. ಸ್ಪಷ್ಟೀಕರಣ ಕೇಳುವುದು ರಾಜ್ಯಪಾಲರಿಗಿರೋದು ಸಂವಿಧಾನದತ್ತ ಹಕ್ಕು ಮತ್ತು ಅಧಿಕಾರ. ಅದನ್ನು ಗೌರವಿಸುವುದನ್ನು ಬಿಟ್ಟು ಸರ್ಕಾರದ ಪ್ರತಿನಿಧಿಗಳು ರಾಜ್ಯಪಾಲರನ್ನು ಮನಬಂದಂತೆ ನಿಂದಿಸಿದ್ದಾರೆ. ಯಾರೋ ಜನಸಾಮಾನ್ಯ ನಿಂದಿಸಿದರೆ ಅದು ಬೇರೆಯಾಗಿರುತಿತ್ತು ಅದರೆ ಮಂತ್ರಿಗಳು ದಲಿತ ಅಂತ ಮತ್ತು ಏಕವಚನದಲ್ಲಿ ಹೀಯಾಳಿಸಿದ್ದಾರೆ ಮತ್ತು ಗೌರವಾನ್ವಿತ ರಾಜ್ಯಪಾಲರ ಪೋಟೋಗಳನ್ನು ಸುಟ್ಟಿದ್ದಾರೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ