ದೊಡ್ಡಣ್ಣ ಎಂದರೆ ವಿಷ್ಣುವರ್ಧನ್​ಗೆ ಬಹಳ ಆತ್ಮೀಯತೆ: ಆ ದಿನಗಳ ಮೆಲುಕು ಹಾಕಿದ ನಟ

Edited By:

Updated on: Sep 17, 2025 | 8:09 PM

ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಪ್ತರು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಲವು ಸಿನಿಮಾಗಳಲ್ಲಿ ವಿಷ್ಣುವರ್ಧನ್ ಮತ್ತು ದೊಡ್ಡಣ್ಣ ಅವರು ಜೊತೆಯಾಗಿ ನಟಿಸಿದ್ದರು. ದೊಡ್ಡಣ್ಣ ಅವರು ಟಿವಿ9 ಜೊತೆ ಮಾತನಾಡಿ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್​ದಾರೆ. ವಿಡಿಯೋ ಇಲ್ಲಿದೆ ನೋಡಿ..

ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬದ (Vishnuvardhan Birthday) ಪ್ರಯುಕ್ತ ಆಪ್ತರು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಲವು ಸಿನಿಮಾಗಳಲ್ಲಿ ವಿಷ್ಣುವರ್ಧನ್ (Dr Vishnuvardhan) ಹಾಗೂ ದೊಡ್ಡಣ್ಣ ಅವರು ಜೊತೆಯಾಗಿ ನಟಿಸಿದ್ದರು. ದೊಡ್ಡಣ್ಣ ಅವರು ಟಿವಿ9 ಜತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್​ದಾರೆ. ‘ವಿಷ್ಣುವರ್ಧನ್ ಅವರ ಮನೆಯಲ್ಲಿ ನಾನು ಬಹಳ ಸಲ ಊಟ ಮಾಡಿದ್ದೇನೆ. ಅವರ ಮನೆಯ ಬಿಸಿಬೇಳೆ ಬಾತ್, ಮೊಸರನ್ನ ಅಂದರೆ ನನಗೆ ಇಷ್ಟ. ಕೆಲವೊಮ್ಮೆ 7.20ಕ್ಕೆ ಫೋನ್ ಮಾಡುತ್ತಿದ್ದರು. ಬಿಸಿಬೇಳೆ ಬಾತ್, ಮೊಸರನ್ನ, ಚಟ್ನಿ ರೆಡಿಯಾಗಿದೆ. 9 ಗಂಟೆಗೆ ನೀವು ಇಲ್ಲಿಗೆ ಬರಬೇಕು ಅಂತ ಕರೆಯುತ್ತಿದ್ದರು. ನಾನು ಮತ್ತು ರಾಕ್​ಲೈನ್ ವೆಂಕಟೇಶ್ ಎಲ್ಲೇ ಇದ್ದರೂ ಕೂಡಲೇ ಅವರ ಮನೆಗೆ ಹೋಗಿ ಊಟ ಮಾಡುತ್ತಿದ್ದೆವು. ಅವರು ಶಿಸ್ತಿನ ಸಿಪಾಯಿ ಆಗಿದ್ದರು’ ಎಂದು ವಿಷ್ಣುವರ್ಧನ್ ಅವರನ್ನು ದೊಡ್ಡಣ್ಣ (Doddanna) ಸ್ಮರಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.