‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್

| Updated By: ಮದನ್​ ಕುಮಾರ್​

Updated on: Apr 14, 2025 | 7:31 PM

ಬ್ಯಾಂಕ್ ಜನಾರ್ದನ್ ಬಗ್ಗೆ ಮಾತನಾಡುತ್ತಾ ಹಿರಿಯ ನಟ ಉಮೇಶ್ ಅವರು ಭಾವುಕರಾಗಿದ್ದಾರೆ. ಅಗಲಿದ ಗೆಳೆಯನನ್ನು ಅವರು ನೆನಪಿಸಿಕೊಂಡಿದ್ದಾರೆ. ಮೊದಲು ಬ್ಯಾಂಕ್ ಉದ್ಯೋಗಿ ಆಗಿದ್ದ ಜನಾರ್ದನ್ ಅವರು ಆ ಕೆಲಸ ತೊರೆದು ಸಿನಿಮಾ ನಟನಾಗಿದ್ದರು. ಆ ಬಗ್ಗೆ ಉಮೇಶ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಹಿರಿಯ ನಟ ಎಂ.ಎಸ್. ಉಮೇಶ್ (MS Umesh) ಅವರು ಬ್ಯಾಂಕ್ ಜನಾರ್ದನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಬಣ್ಣದ ಹಿಂದೆ ಓಡಿ ಹೋದವನು ಧೂಳು ಕುಡಿಯಬೇಕಾಗುತ್ತದೆ. ಬ್ಯಾಂಕ್ ಕೆಲಸ ಬಿಟ್ಟು ಜನಾರ್ದನ್ ತಪ್ಪು ಮಾಡಿದ. ಕೆಲವರು ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಸಿನಿಮಾದಲ್ಲಿ ನಟಿಸಿದರು. ಆದರೆ ಕೆಲಸ ಬಿಟ್ಟಿರಲಿಲ್ಲ. ಜನರು ನಮ್ಮ ಕಲೆಯಲ್ಲಿ ಎರಡು ಗಂಟೆ ಎಂಜಾಯ್ ಮಾಡುತ್ತಾರೆ. ಆಮೇಲೆ ನಮಗೆ ನಾವೇ. ಬ್ಯಾಂಕ್ ಜನಾರ್ದನ್ (Bank Janardhan) ಕೆಲಸ ಬಿಟ್ಟಿದ್ದು ಅವನ ನಿರ್ಧಾರ. ನಮಗೆ ಅವನ ಅಗಲಿಕೆಯಿಂದ ದುಃಖ ಆಗಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ’ ಎಂದು ಉಮೇಶ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.