ಬೆಂಗಳೂರಿನಲ್ಲಿ ಹೀಗಿತ್ತು ‘ಜವಾನ್’ ಹವಾ: ಕೇಕ್ ಕತ್ತರಿಸಿ ಸಂಭ್ರಮಿಸಿದ ಶಾರುಖ್ ಅಭಿಮಾನಿಗಳು
Jawan Movie: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸಹ ಶಾರುಖ್ ಖಾನ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ನೆರೆದು ಕೇಕ್ ಕತ್ತರಿಸಿ, ಶಾರುಖ್ಗೆ ಜಯಕಾರ ಹಾಕಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳು 'ಜವಾನ್' ಸಿನಿಮಾವನ್ನು ಸ್ವಾಗತಿಸಿದ ರೀತಿ ಹೀಗಿತ್ತು ನೋಡಿ.
ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಇಂದು (ಸೆಪ್ಟೆಂಬರ್ 07) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ದೇಶ-ವಿದೇಶಗಳಲ್ಲಿಯೂ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಶಾರುಖ್ ಖಾನ್ ಹೊಂದಿದ್ದಾರೆ. ದಕ್ಷಿಣ-ಉತ್ತರವೆನ್ನದೆ ಶಾರುಖ್ ಸಿನಿಮಾವನ್ನು ಎಲ್ಲರೂ ಇಂದು ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಹ ದೊಡ್ಡ ಮಟ್ಟದಲ್ಲಿಯೇ ‘ಜವಾನ್’ ಸಿನಿಮಾ ಬಿಡುಗಡೆ ಆಗಿದ್ದು, ನಗರದ ಶಾರುಖ್ ಖಾನ್ ಅಭಿಮಾನಿಗಳು ಚಿತ್ರಮಂದಿರಗಳ ಎದುರು ಕೇಕ್ ಕತ್ತರಿಸಿ ಶಾರುಖ್ ಖಾನ್ಗೆ ಜಯಕಾರ ಹಾಗಿ ಸಂಭ್ರಮಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 07, 2023 09:45 PM
Latest Videos