Karnataka Budget Session: ವಜುಭಾಯಿ ವಾಲಾರ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿ ಎಂದ ಶರಣಗೌಡ ಕಂದ್ಕೂರ್
ಶರಣಗೌಡ ಕಂದ್ಕೂರ್ ತಾನು ಗ್ಯಾರಂಟಿ ಯೋಜನೆಗಳ ವಿರೋಧಿ ಅಲ್ಲವೆನ್ನುತ್ತಾರೆ, ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಸ್ತ್ರೀಯರಿಗೆ ಸ್ವಾವಲಂಬಿ ಬದುಕು ನಡೆಸಲು ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಬಗ್ಗೆ ಅವರು ಒಲವು ಪ್ರಕಟಿಸುವುದು ವ್ಯಂಗ್ಯದ ಧಾಟಿಯಲ್ಲೋ ಅಂತ ಗೊತ್ತಾಗಲ್ಲ,
ಬೆಂಗಳೂರು, 19 ಮಾರ್ಚ್: ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಇಂದು ಸದನದಲ್ಲಿ ಮಾತಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ 19 ಬಾರಿ ಬಜೆಟ್ ಮಂಡಿಸಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿ ಎನ್ನುತ್ತಾರೆ. ವಜುಭಾಯಿ ವಾಲಾ ಕರ್ನಾಟಕದ ರಾಜ್ಯಪಾಲರಾಗುವ ಮೊದಲು ಗುಜರಾತ್ ರಾಜ್ಯದ ಹಣಕಾಸು ಸಚಿವರಾಗಿ ದಾಖಲೆಯ 18 ಬಾರಿ ಬಜೆಟ್ ಮಂಡಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Assembly Session; ಅಗತ್ಯ ಬಿದ್ದರೆ ಗುರುಮಠಕಲ ಸಿಪಿಐನನ್ನು ಕೆಲಸದಿಂದ ಡಿಸ್ಮಿಸ್ ಮಾಡುತ್ತೇನೆ: ಜಿ ಪರಮೇಶ್ವರ್
Published on: Mar 19, 2025 01:11 PM