Lohitashwa: ‘ನನ್ನ ಕಣ್ಣೆದುರಲ್ಲೇ ತಂದೆಗೆ ಹೃದಯಾಘಾತ ಆಯ್ತು’: ಲೋಹಿತಾಶ್ವ ಆರೋಗ್ಯದ ಬಗ್ಗೆ ಪುತ್ರ ಶರತ್ ಮಾಹಿತಿ
Kannada Actor Lohitashwa: 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಲೋಹಿತಾಶ್ವ ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿದೆ. ಅವರ ಸ್ಥಿತಿ ಬಗ್ಗೆ ಪುತ್ರ ಶರತ್ ಲೋಹಿತಾಶ್ವ ಮಾತನಾಡಿದ್ದಾರೆ.
ನಟ ಲೋಹಿತಾಶ್ವ (Lohitashwa) ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‘ತಂದೆಯ ಸ್ಥಿತಿ ತುಂಬ ಗಂಭೀರವಾಗಿದೆ. ಸದ್ಯಕ್ಕೆ ಅವರು ವೆಂಟಿಲೇಟರ್ನಲ್ಲಿ ಇದ್ದಾರೆ. ಶೀಘ್ರದಲ್ಲೇ ವೈದ್ಯರು ಹೆಚ್ಚಿನ ಮಾಹಿತಿ ನೀಡುತ್ತಾರೆ’ ಎಂದು ಪುತ್ರ ಶರತ್ ಲೋಹಿತಾಶ್ವ ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ಲೋಹಿತಾಶ್ವ ಅವರಿಗೆ ಇನ್ಫೆಕ್ಷನ್ ಆಗಿತ್ತು. ಅದಕ್ಕೆ ಚಿಕಿತ್ಸೆ ನೀಡುತ್ತಿರುವಾಗಲೇ ಪರಿಸ್ಥಿತಿ ಗಂಭೀರ ಆಯಿತು. ‘ಇನ್ನೇನು ಚೇತರಿಸಿಕೊಳ್ಳುತ್ತಾರೆ ಎನ್ನುವಾಗಲೇ ಅವರಿಗೆ ಚಳಿ ಶುರುವಾಯಿತು. ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿತು. ನನ್ನ ಕಣ್ಣ ಮುಂದೆಯೇ ಅವರಿಗೆ ಹೃದಯಾಘಾತ (Heart Attack) ಆಯಿತು’ ಎಂದು ಆ ಘಟನೆಯನ್ನು ಶರತ್ ಲೋಹಿತಾಶ್ವ (Sharath Lohitashwa) ವಿವರಿಸಿದ್ದಾರೆ. ತಂದೆಯ ಪರಿಸ್ಥಿತಿಯ ಬಗ್ಗೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ.
Published on: Oct 11, 2022 02:06 PM
Latest Videos