ನಮ್ಮ ನಾಯಕ ಹೇಡಿ…ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ: ಪಾಕ್ ಎಂಪಿ ಕೆಂಡಾಮಂಡಲ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ಪಾಕಿಸ್ತಾನದ ಸಂಸತ್ನಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಭಾರತದ ಪ್ರಧಾನಿ ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ಸಂಸದ ಶಾಹಿದ್ ಖಟ್ಟಕ್ ಗುಡುಗಿದ್ದಾರೆ.
ನವದೆಹಲಿ, (ಮೇ 09): ಪಾಕಿಸ್ತಾನದ ಕ್ಷಿಪಣಿ ಹಾಗೂ ಡ್ರೋಣ್ ದಾಳಗಳನ್ನು ಭಾರತ ಸೇನಾಪಡೆ ವಿಫಲಗೊಳಿಸಿದೆ, ಅಲ್ಲದೇ ಭಾರತ ಸೇನೆ ಪಾಕಿಸ್ತಾನದ ವಿವಿಧ ನಗರಗಳ ಮೇಲೆ ಪ್ರತಿದಾಳಿ ಮಾಡಿದ್ದು, ಪಾಕಿಸ್ತಾನ ತತ್ತರಿಸಿ ಹೋಗಿದೆ. ಇನ್ನು ಭಾರತದ ದಾಳಿಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಹೆದರಿ ಗೌಪ್ಯ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ ಎನ್ನುವ ವರದಿಯಾಗಿದೆ. ಇದರ ಮಧ್ಯ ಪಾಕಿಸ್ತಾನದ ಸಂಸದರೊಬ್ಬರು ತಮ್ಮದೇ ಪ್ರಧಾನಿಯನ್ನು ಹೇಡಿ ಎಂದು ಟೀಕಿಸಿದ್ದಾರೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ಪಾಕಿಸ್ತಾನದ ಸಂಸತ್ನಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಭಾರತದ ವಿರುದ್ಧ ಒಂದೇ ಒಂದು ಹೇಳಿಕೆ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಮ್ಮ ನಾಯಕ, ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪಾಕ್ ಪ್ರಧಾನಿ ವಿರುದ್ಧ ಸಂಸದ ಸಂಸದ ಶಾಹಿದ್ ಖಟ್ಟಕ್ ವಾಗ್ದಾಳಿ ನಡೆಸಿದ್ದಾನೆ.
ಭಾರತೀಯ ಸೇನೆ ಹಿಮ್ಮೆಟ್ಟಿಸಲು ಪಾಕಿಸ್ತಾನ ವಿಫಲವಾಗಿದ್ದರಿಂದ ಆಕ್ರೋಶಗೊಂಡಿರುವ ಸಂಸದ ಶಾಹಿದ್ ಖಟ್ಟಕ್, ನಮ್ಮ ದೇಶದ ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ. ರಾಜ ಸಿಂಹದಂತೆ ಇದ್ದರೆ ಸೇನೆಯೂ ಸಿಂಹದಂತೆ ಇರುತ್ತೆ. ರಾಜ ಹೇಡಿಯಾಗಿದ್ದು ಸೇನೆ ಸಿಂಹದಂತಿದ್ದರೆ ಪ್ರಯೋಜನವಿಲ್ಲ ಎಂದು ಟಿಪ್ಪು ಸುಲ್ತಾನ್ ಹೇಳಿಕೆ ಉಲ್ಲೇಖಿಸಿ ತಮ್ಮ ದೇಶದ ಪ್ರಧಾನಿಯನ್ನು ಹೇಡಿ ಎಂದು ಕಿಡಿಕಾರಿದರು.
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

