Video: ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ?

Updated on: Jun 10, 2026 | 2:41 PM

ಕೇರಳದಲ್ಲಿ ಶಿಗೆಲ್ಲ ಸೋಂಕು ಆರ್ಭಟಿಸಿದೆ, ನಾಲ್ಕು ವರ್ಷದ ಮಗುವೊಂದು ಬಲಿಯಾಗಿದೆ. ಕಲುಷಿತ ಆಹಾರ, ನೀರಿನಿಂದ ಹರಡುವ ಈ ಬ್ಯಾಕ್ಟೀರಿಯಾ ಕರುಳಿನ ಮೇಲೆ ಪರಿಣಾಮ ಬೀರಿ ಅತಿಸಾರ, ಜ್ವರಕ್ಕೆ ಕಾರಣವಾಗುತ್ತದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚು ಅಪಾಯಕಾರಿ. ಕುದಿಸಿ ಆರಿಸಿದ ನೀರು ಕುಡಿಯುವುದು, ಕೈ ಸ್ವಚ್ಛತೆ, ಮತ್ತು ರಸ್ತೆಬದಿ ಆಹಾರ ಸೇವಿಸದಿರುವುದು ಮುನ್ನೆಚ್ಚರಿಕಾ ಕ್ರಮಗಳು.

ಕೇರಳದಲ್ಲಿ ಶಿಗೆಲ್ಲ ಮಾರಿ ಸೋಂಕಿನಿಂದ ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಮಕ್ಕಳ ಮೇಲೆ ಈ ಸೋಂಕು ಪರಿಣಾಮ ಬೀರಿದೆ. ಶಿಗೆಲ್ಲ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಶಿ ಎಲ್ಲೋಸಿಸ್ ತೀವ್ರ ಕರುಳುಬೇನೆ ಅಥವಾ ಭೇದಿಗೆ ಕಾರಣವಾಗುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಈ ಸೋಂಕು ಹರಡುತ್ತದೆ. ಈ ಬ್ಯಾಕ್ಟೀರಿಯಾ ಜೀರ್ಣಾಂಗ ವ್ಯವಸ್ಥೆಯ ಮೇಲೆ ದಾಳಿ ಮಾಡಿ, ಹೊಟ್ಟೆಯಲ್ಲಿ ವಿಷ ಉತ್ಪಾದಿಸುತ್ತದೆ.

ಮುನ್ನೆಚ್ಚರಿಕಾ ಕ್ರಮಗಳೆಂದರೆ ಕುದಿಸಿ ಆರಿಸಿದ ನೀರನ್ನು ಕುಡಿಯುವುದು, ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯದ ನಂತರ ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ಸಾಬೂನಿನಿಂದ ತೊಳೆಯುವುದು. ರಸ್ತೆಬದಿ ತೆರೆದಿಟ್ಟಿರುವ ಆಹಾರ, ಹಳಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 10, 2026 02:39 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More