ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
Shiva Rajkumar: ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿ, ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ‘45’ನ ಸುದ್ದಿಗೋಷ್ಠಿ ನಡೆದಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಸಿನಿಮಾದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು.
ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಇಂದು ಚಿತ್ರತಂಡ ಸುದ್ದಿಗೋಷ್ಠಿ ಹಂಚಿಕೊಂಡು ಸಿನಿಮಾ ಬಗ್ಗೆ ಕೆಲ ಮಾಹತಿ ಹಂಚಿಕೊಂಡಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಸಹ ನಟರಾದ ಉಪೇಂದ್ರ, ರಾಜ್ ಬಿ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ಅರ್ಜುನ್ ಜನ್ಯ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ಚಿತ್ರೀಕರಣದ ಅನುಭವ ಬಿಚ್ಚಿಟ್ಟ ಶಿವಣ್ಣ, ‘ಬ್ರೇಕ್ ಬಳಿಕ ಚಿತ್ರೀಕರಣ ನಡೆಯುತ್ತಿತ್ತು, ಆದರೂ ಹೊಸದಾಗಿ ಇರುತ್ತಿತ್ತು, ಚಿತ್ರೀಕರಣದ ಸಮಯದಲ್ಲಿದ್ದ ಸಹಾಯಕ ನಿರ್ದೇಶಕರನ್ನೆಲ್ಲ ಬಹಳ ಕಾಡಿಸಿದ್ದೀವಿ. ಹೆಣ್ಣು ಮಕ್ಕಳನ್ನು ಗೋಳು ಹೊಯ್ದುಕೊಂಡಿದ್ದೇನೆ. ಅದೆಲ್ಲ ತಮಾಷೆಗೆ. ನೀವು ಬೈದು ಕೊಂಡರೆ ಬೈದು ಕೊಳ್ಳಿ, ನಾನಿರೋದು ಹೀಗೆ’ ಎಂದು ತಮಾಷೆ ಮಾಡಿದರು ಶಿವರಾಜ್ ಕುಮಾರ್. ‘45’ ಸಿನಿಮಾ ಸಂಖ್ಯೆ ಒಟ್ಟು ಮಾಡಿದರೆ 9 ಬರುತ್ತೆ ಈ ಸಿನಿಮಾ ಪಕ್ಕಾ ಹಿಟ್ ಆಗುತ್ತದೆ ಎಂದರು ಶಿವಣ್ಣ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos