ಅಪ್ಪನ ಸಿನಿಮಾ ನೋಡಿ ಶಿವಣ್ಣನ ಪುತ್ರಿ ನಿವೇದಿತಾ ಪ್ರತಿಕ್ರಿಯಿಸಿದ್ದು ಹೀಗೆ

ಅಪ್ಪನ ಸಿನಿಮಾ ನೋಡಿ ಶಿವಣ್ಣನ ಪುತ್ರಿ ನಿವೇದಿತಾ ಪ್ರತಿಕ್ರಿಯಿಸಿದ್ದು ಹೀಗೆ

ಮಂಜುನಾಥ ಸಿ.
|

Updated on: Oct 19, 2023 | 10:25 PM

Ghost: ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಗಿದೆ. ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಮೊದಲ ದಿನ ಅಭಿಮಾನಿಗಳೊಡನೆ ಕೂತು ಸಿನಿಮಾ ವೀಕ್ಷಿಸಿ, ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಇಂದು (ಅಕ್ಟೋಬರ್ 19) ಬಿಡುಗಡೆ ಆಗಿದೆ. ಅಭಿಮಾನಿಗಳು ಮಧ್ಯ ರಾತ್ರಿಯಿಂದಲೇ ಸಿನಿಮಾ ವೀಕ್ಷಿಸಿ ಖುಷ್ ಆಗಿದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಸಹ ಮೊದಲ ದಿನವೇ ಅಪ್ಪನ ಸಿನಿಮಾವನ್ನು ಅಭಿಮಾನಿಗಳ ಜೊತೆ ಕೂತು ನೋಡಿದ್ದಾರೆ. ‘ಘೋಸ್ಟ್’ ಸಿನಿಮಾ ನೋಡಿದ ನಿವೇದಿತಾ, ಸಿನಿಮಾ ಬಹಳ ಚೆನ್ನಾಗಿದೆ, ಅಪ್ಪನನ್ನು ಬೇರೆ ಬೇರೆ ಶೇಡ್​ನ ಪಾತ್ರಗಳಲ್ಲಿ ನೋಡಿ ಖುಷಿ ಆಯಿತು ಎಂದಿದ್ದಾರೆ. ‘ಮನೆಯಲ್ಲಿ ಯಾರು ನಿಜವಾದ ಒರಿಜಿನಲ್ ಗ್ಯಾಂಗ್​ಸ್ಟರ್? ಅಪ್ಪನಾ ಅಮ್ಮನಾ?’ ಎಂಬ ಪ್ರಶ್ನೆಗೆ ನನಗಂತೂ ಅಪ್ಪನೇ ಒರಿಜಿನಲ್ ಗ್ಯಾಂಗ್​ಸ್ಟರ್ ಎಂದು ಉತ್ತರಿಸಿದ್ದಾರೆ ನಿವೇದಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ