ವ್ಹೈಟ್ ಕಾಮಗಾರಿಗೆ ಚಾಲನೆ ನೀಡುವ ಮೊದಲು ಶಿವಕುಮಾರ್-ಅಶ್ವಥ್ ನಾರಾಯಣ ನಡುವೆ ಆತ್ಮೀಯ ಮಾತು
ನಿಮಗೆ ನೆನಪಿರಬಹುದು. ಸುಮಾರು ಎರಡು ವರ್ಷಗಳ ಹಿಂದೆ ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಶ್ವಥ್ ನಾರಾಯಣ ಮತ್ತು ಆಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದ ಡಿಕೆ ಸುರೇಶ್ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ವೇದಿಕೆಯ ಮೇಲೆ ತೋಳೇರಿಸಿಕೊಂಡು ಹೊಡೆದಾಟಕ್ಕೆ ಮುಂದಾಗಿದ್ದರು!
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹಿರಿಯ ಬಿಜೆಪಿ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ ನಡುವೆ ರಾಜಕೀಯ ವೈಷಮ್ಮ ವಿರೋಧ ಇರೋದು ಗೊತ್ತಿರದ ವಿಷಯವೇನಲ್ಲ, ಆದರೆ ಅವರ ನಡುವೆ ಆತ್ಮೀಯತೆ ಮತ್ತು ಸ್ನೇಹ ಇರೋದು ಗೊತ್ತಿರಲಿಲ್ಲ. ಇವತ್ತು ಶಿವಕುಮಾರ್, ನಗರದ ಸದಾಶಿವನಗರದಲ್ಲಿರುವ ಬಾಷ್ಯಂ ಸರ್ಕಲ್ ನಲ್ಲಿ ವ್ಹೈಟ್ ಟ್ಯಾಪಿಂಗ್ ಕಾಮಗಾರಿಗೆ ಚಾಲನೆ ನೀಡಿದರು ಮತ್ತು ಇದೇ ಕಾರಣಕ್ಕೆ ಪೂಜೆಯನ್ನು ನೆರವೇರಿಸಲಾಯಿತು. ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾಗ ಶಿವಕುಮಾರ್ ಮತ್ತು ಅಶ್ವಥ್ ನಾರಾಯಣ ಅಕ್ಕಪಕ್ಕ ನಿಂತಿರುವುದನ್ನು ಮತ್ತು ಉಪ ಮುಖ್ಯಮಂತ್ರಿ ಮಲ್ಲೇಶ್ವರಂ ಶಾಸಕನ ಬೆನ್ನ ಮೇಲೆ ಕೈಯಿಟ್ಟು ಕಿವಿಯಲ್ಲಿ ಏನೋ ಹೇಳುವುದನ್ನು ನೋಡಬಹುದು. ಅಶ್ವಥ್ ಬಹಳ ತನ್ಮಯತೆಯಿಂದ ಶಿವಕುಮಾರ್ ಹೇಳೋದನ್ನು ಕೇಳಿಸಿಕೊಳ್ಳುತ್ತಾರೆ. ಅಲ್ಲಿಂದ ಹೊರಡುವಾಗಲೂ ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 15 ಸಾವಿರ ಕೋಟಿ ರೂ. ಕಿಕ್ ಬ್ಯಾಕ್: ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ಗಂಭೀರ ಆರೋಪ