15 ಸಾವಿರ ಕೋಟಿ ರೂ. ಕಿಕ್ ಬ್ಯಾಕ್: ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ಗಂಭೀರ ಆರೋಪ
ಮೂವತ್ತು ವರ್ಷಕ್ಕೆ ಲೀಸ್ಗೆ ಕೊಟ್ಟಿದ್ದಾರೆ. ಅದರಲ್ಲೂ 45 ಸಾವಿರ ಕೋಟಿಗೆ 15 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲು ಪೆನ್ನು ಪೇಪರ್ ಪಡೆದವರು ಮುಂದಾಗಿದ್ದಾರೆ ಎಂದು ಹೆಸರೇಳದೇ ಡಿಕೆ ಶಿವಕುಮಾರ್(DK Shivakumar) ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ, ಜು.14: ಬೆಂಗಳೂರಿನಲ್ಲಿ ಕಸ ಎತ್ತಲೂ ಬ್ಲಾಕ್ ಲೀಸ್ಟ್ನಲ್ಲಿ ಇರುವ ಗುತ್ತಿಗೆದಾರನಿಗೆ ಟೆಂಡರ್ ಕೊಟ್ಟಿದ್ದಾರೆ ಎಂದು ಹೆಸರೇಳದೇ ಡಿಕೆ ಶಿವಕುಮಾರ್(DK Shivakumar) ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಗಂಭೀರ ಆರೋಪ ಮಾಡಿದ್ದಾರೆ. ಇಂದು(ಭಾನುವಾರ) ಮಂಡ್ಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೂವತ್ತು ವರ್ಷಕ್ಕೆ ಲೀಸ್ಗೆ ಕೊಟ್ಟಿದ್ದಾರೆ. ಅದರಲ್ಲೂ 45 ಸಾವಿರ ಕೋಟಿಗೆ 15 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲು ಪೆನ್ನು ಪೇಪರ್ ಪಡೆದವರು ಮುಂದಾಗಿದ್ದಾರೆ. ಆದರೆ, ಮೂವತ್ತು ವರ್ಷಕ್ಕೆ ನಾವು ನೀವು ಬದುಕಿರಲಿಲ್ಲ ಎಂದಿದ್ದಾರೆ.
ಸಚಿವ ಚಲುವರಾಯಸ್ವಾಮಿ ವಿರುದ್ಧ ಹೆಚ್ಡಿಕೆ ಪರೋಕ್ಷ ವಾಗ್ದಾಳಿ
‘ಈಗಾಗಲೇ ಎಸ್ಸಿ, ಎಸ್ಟಿ ಹಣ ಲೂಟಿ ಹೊಡೆದು ರಾಜಾರೋಷವಾಗಿ ಓಡಾಟ ನಡೆಸಿದ್ದಾರೆ. ಅಂತಹ ಭಂಡತನದ ರಾಜಕಾರಣ ನಾನು ಮಾಡುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಹೆಚ್ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ನಿರ್ನಾಮ ಮಾಡಿದ್ದೇವೆ ಎಂಬ ನಿಮ್ಮ ಅಹಂಕಾರದ ಮಾತುಗಳು, ನಾನು ಲೋಕಸಭೆಗೆ ನಿಲ್ಲುವಂತೆ ಮಾಡಿತು. ಜೆಡಿಎಸ್ ಪಕ್ಷವನ್ನು ಬಿಜೆಪಿ ಮುಂದೆ ಮಂಡಿಯೂರಿಸಿದ್ದಾರೆ. ‘ಬನ್ನಿ ನಮ್ಮ ಪಕ್ಷಕ್ಕೆ ಎಂದು ಕನಕಪುರದ ಸ್ನೇಹಿತರು ಹೇಳಿದ್ದರು. ಜೆಡಿಎಸ್ ಪಕ್ಷ ಕಟ್ಟಿದ್ದು ಹೆಚ್.ಡಿ.ದೇವೇಗೌಡರು, ಅವರ 90ನೇ ವಯಸ್ಸಿನಲ್ಲಿ ಹಲವು ಘಟನೆಗಳು ನಡೆದಿವೆ. ನೋವಿನ ನಡುವೆ ರಾಜ್ಯದ ಅಭಿವೃದ್ಧಿ ಅವರ ಹೃದಯದಲ್ಲಿದೆ. ‘ನನ್ನ ಬಗ್ಗೆ ಏನು ಬೇಕಾದರೂ ಮಾತಾಡಿ, ಆದರೆ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ:ಕುಮಾರಸ್ವಾಮಿ ಇಲ್ಲದ ಈ ಬಾರಿಯ ವಿಧಾನಮಂಡಲ ಅಧಿವೇಶನ ವಿಪಕ್ಷ ಪಾಳಯದಲ್ಲಿ ಶೂನ್ಯ ಅವಧಿ
ಸರ್ವ ಪಕ್ಷಗಳ ಸಭೆಗೆ ಗೈರಾಗುತ್ತಾರಾ ಕೇಂದ್ರ ಸಚಿವ ಹೆಚ್ ಡಿಕೆ ?
ಸಮಸ್ಯೆ ಕೇಳಲು ಅಧಿಕಾರಿಗಳನ್ನು ಕಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ನಾನೇ ಹೇಗೆ ಅಧಿಕಾರಿಗಳ ಬಳಿ ಸಮಸ್ಯೆ ಕೇಳಲಿ, ನಾನು ಅಲ್ಲಿಗೆ ಹೋಗಬೇಕಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು. ‘ರಾಜ್ಯ ಸರ್ಕಾರಕ್ಕೆ ನಾನು ಸಂಪೂರ್ಣ ಸಹಕಾರ ಕೊಡುತ್ತೆನೇ ಎಂದಿದ್ದೆ, ಆದರೆ ಸರ್ಕಾರ ಅಧಿಕಾರಿಗಳನ್ನ ಕಳಿಸದೆ ದ್ವೇಷದ ರಾಜಕಾರಣ ಮಾಡಿದೆ ಎಂದರು. ಈ ಹೇಳಿಕೆ ಬೆನ್ನಲ್ಲೇ ಸರ್ವ ಪಕ್ಷಗಳ ಸಭೆಗೆ ಗೈರಾಗುತ್ತಾರಾ ಕೇಂದ್ರ ಸಚಿವ ಕುಮಾರಸ್ವಾಮಿ ಎಂಬ ಪ್ರಶ್ನೆ ಮೂಡಿದೆ.
ಸ್ವಾಭಿಮಾನಕ್ಕೆ ಹೆಸರಾಗಿರುವುದು ಮಂಡ್ಯ ಜಿಲ್ಲೆ
‘ದೇವೇಗೌಡರು ಮೇಲಿನ ಅಭಿಮಾನದಿಂದ ನನಗೆ ಪ್ರಧಾನಿಗಳು ದೊಡ್ಡ ಸ್ಥಾನ ನೀಡಿದ್ದಾರೆ. ದೆಹಲಿಯಲ್ಲಿ ನನ್ನನ್ನು ಗುರುತಿಸುತ್ತಾರೆಂದರೆ ಜನರು ಕೊಟ್ಟ ಪ್ರೀತಿ. ನಾನು ರಾಮನಗರವನ್ನೂ, ರಾಜ್ಯವನ್ನು ಮರೆಯಲ್ಲ. ಭಗವಂತ ನನ್ನನ್ನು ಉಳಿಸಿರುವುದು ರಾಜ್ಯದ ಜನರ ಸೇವೆಗೆ. ಸ್ವಾಭಿಮಾನಕ್ಕೆ ಹೆಸರಾಗಿರುವುದು ಮಂಡ್ಯ ಜಿಲ್ಲೆ ಎಂದು ಹಲವಾರು ಬಾರಿ ಜಿಲ್ಲೆಯ ಜನರು ನಿರೂಪಿಸಿದ್ದಾರೆ. ಪೇಪರ್, ಪೆನ್ನು ಕೇಳಿದವರಿಗೂ ಮಂಡ್ಯ ಜನ 6 ಸ್ಥಾನ ಕೊಟ್ಟರು. ಈಗ ಏನಾಗಿದೆ, ಕಿಕ್ ಬ್ಯಾಕ್ ತೆಗೆದುಕೊಳ್ಳುವುದರಲ್ಲಿ ಉಪಯೋಗ ಮಾಡ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಸಣ್ಣತನದ ರಾಜಕಾರಣ ಸರ್ಕಾರ ಮಾಡುತ್ತಿದೆ
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ. ರಾಜ್ಯದ ಅಭಿವೃದ್ಧಿಗಾಗಿ ನನ್ನ ಸಹಕಾರ ಇದೆ, ಉಪಯೋಗ ಮಾಡಿಕೊಳ್ಳಿ ಎಂದರೆ, ‘ನನ್ನ ಜನತಾದರ್ಶನ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ನಿರ್ಬಂಧ ಮಾಡಿದ್ದಾರೆ.ಈ ಮೂಲಕ ಸಣ್ಣತನದ ರಾಜಕಾರಣ ಸರ್ಕಾರ ಮಾಡುತ್ತಿದೆ. ಇವತ್ತು ಸರ್ವ ಪಕ್ಷ ಸಭೆ ಕರೆದಿದ್ದಾರೆ. ಆದರೆ, ರಾಜ್ಯದ ಅಧಿಕಾರಿಗಳ ಜೊತೆ ನನಗೆ ಮಾತನಾಡಲು ಅಧಿಕಾರ ಇಲ್ಲವಾದರೆ, ರಾಜ್ಯದ ಪರವಾಗಿ ಹೇಗೆ ಕೆಲಸ ಮಾಡಲಿ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ
‘ನನಗೆ ನೋವಿದೆ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಇದು ನನ್ನ ಮನಸ್ಸಿನ ನೋವನ್ನ ಹೆಚ್ಚಿಸಿದೆ. ಕೇಂದ್ರ ಸಚಿವನಾದ ನಂತರ ಮಂಡ್ಯದಲ್ಲಿ ಜನತಾ ದರ್ಶನ ಮಾಡಿದೆ. ಬೆಳಿಗ್ಗೆ 12ಗಂಟೆಯಿಂದ ರಾತ್ರಿ 8ಗಂಟೆವರೆಗೆ ಅರ್ಜಿ ಸ್ವೀಕಾರ ಮಾಡಿದ್ದೆನೆ. 400ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು, ಆರ್ಥಿಕ ನೆರವಿಗೆ ಕೋರಿ 300ಕ್ಕೂ ಹೆಚ್ಚು ಅರ್ಜಿ, ನಿರುದ್ಯೋಗ ಸಮಸ್ಯೆ ಕುರಿತ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜೊತೆಗೆ ನಿವೇಶನ, ಮನೆಗಳ ಬೇಡಿಕೆ ಇರುವ ಅರ್ಜಿಗಳಿವೆ.
ಆರ್ಥಿಕ ನೆರವಿಗೆ ಬಂದು ಅರ್ಜಿ ಕೊಡುವವರು ನಿರಾಸೆ ಆಗಬೇಡಿ. ಯಾರಾದರೂ ಕಷ್ಟ ಹೇಳಿಕೊಂಡು ಬಂದಾಗ ನನ್ನಲ್ಲಿ ಇದ್ದರೂ, ಇಲ್ಲದಿದ್ರು ಕೈಲಾದ ಸಹಾಯ ಮಾಡಿದ್ದೇನೆ. ಮನೆ ಕಟ್ಟಲೋ, ಕೃಷಿ ಭೂಮಿ ಅಭಿವೃದ್ಧಿಗೆ ಬ್ಯಾಂಕ್ ಸಾಲ ಮಾಡಿ ನನ್ನನ್ನು ತೀರಿಸು ಎಂದರೆ ಎಲ್ಲಿ ಆಗುತ್ತದೆ. ಆ ಸಾಲ ತೀರಿಸಲು ಮುಂದೆ ದೇವರು ಶಕ್ತಿ ಕೊಡುತ್ತಾನೆ, ನಂಬಿಕೆ ಇದೆ. 3 ಬಾರಿ ವಾಲ್ ರಿಪ್ಲೇಸ್‌ಮೆಂಟ್ ಆದರೂ ದೇವರು ನನ್ನನ್ನು ಬದುಕಿಸಿರುವುದು ಜನರಿಗಾಗಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Sun, 14 July 24