ಗ್ರಾಹಕರಂತೆ ಒಡವೆ ಅಂಗಡಿ ಪ್ರವೇಶಿಸಿ ₹ 7ಲಕ್ಷ ಮೌಲ್ಯದ ಆಭರಣ ಲಪಟಾಯಿಸಿದ ಬುರ್ಖಾಧಾರಿ ಮಹಿಳೆಯರು
ಸಾಮಾನ್ಯವಾಗಿ ದೊಡ್ಡ ದೊಡ್ಡ ಒಡವೆ ಅಂಗಡಿಗಳಲ್ಲಿ ಸೇಲ್ಸ್ ಮನ್ ಮತ್ತು ಸೇಲ್ಸ್ ಗರ್ಲ್ಸ್ ಒಡವೆಗಳ ಟ್ರೇಯನ್ನು ಗ್ರಾಹಕರಿಗೆ ಕೊಡುವಾಗ ಅದರ ತೂಕವನ್ನು ನೋಟ್ ಮಾಡಿಕೊಳ್ಳುತ್ತಾರೆ ಮತ್ತು ಅವರಿಂದ ವಾಪಸ್ಸು ತೆಗೆದುಕೊಂಡ ಬಳಿಕ ತೂಕ ಸರಿಯಿದೆಯಾ ಅಂತ ಪರಿಶೀಲಿಸುತ್ತಾರೆ. ಕಳುವು ಗೊತ್ತಾಗಲು ಇದು ಅತ್ಯುತ್ತಮ ವಿಧಾನ.
ಹಾಸನ: ಇಂಥ ಕಳ್ಳಿಯರು ಬಹಳಷ್ಟು ಕಡೆ ಸಿಕ್ಕಾರು. ಬೇರೆ ಬೇರೆ ಊರುಗಳಲ್ಲಿ ಇದೇ ತೆರನಾಗಿ ನಡೆದಿರುವ ಹಲವಾರು ವಿಡಿಯೋ ಸುದ್ದಿಗಳನ್ನು ನಿಮಗೆ ನೀಡಿದ್ದೇವೆ. ಇಲ್ಲಿ ಕಾಣುತ್ತಿರುವ ಸಿಸಿಟಿವಿ ಫುಟೇಜ್ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿರುವ ಒಂದು ಹೆಸರಾಂತ ಚಿನ್ನಾಭರಣ ಅಂಗಡಿಯಲ್ಲಿ ಸೆರೆಯಾಗಿರುವಂಥದ್ದು. ಬುರ್ಖಾ ಧರಿಸಿರುವ ನಾಲ್ವರು ಮಹಿಳೆಯರು ಗ್ರಾಹಕರ ಹಾಗೆ ಒಡವೆ ಅಂಗಡಿ ಪ್ರವೇಶಿಸಿ ಚಿನ್ನಾಭರಣಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಅಂಗಡಿಯ ಮಾಲೀಕ ನೀಡಿರುವ ಮಾಹಿತಿಯ ಪ್ರಕಾರ ಈ ಕಸುಬಿನಲ್ಲಿ ಪಳಗಿರುವಂತಿರುವ ಕಳ್ಳಿಯರು ಸುಮಾರು ₹ 7 ಲಕ್ಷ ಮೌಲ್ಯದ 94.715 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ. ಅವರ ಮೋಡಸ್ ಅಪರಂಡಿಯನ್ನು ಗಮನಿಸಿ. ಚಿನ್ನಾಭರಣ ನೋಡುವ ನೆಪದಲ್ಲಿ ಒಂದೊಂದು ಟ್ರೇಯಿಂದ ಒಂದು ಆಭರಣವನ್ನು ಎತ್ತ್ತು ಬುರ್ಖಾದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ವೃತ್ತಿಪರ ಕಳ್ಳಿಯರ ಹಾಗೆ ಕೈಚಳಕ ಪ್ರದರ್ಶಿಸುವ ಇವರು ತಾವು ಸಿಸಿಟಿವಿ ಕೆಮೆರಾ ವೀಕ್ಷಣೆಯಲ್ಲಿರಬಹುದಾದ ಸಂಗತಿಯನ್ನು ಯಾಕೆ ಮರೆತರೋ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನೆಲಮಂಗಲ: ಪಿಸ್ಟಲ್ ಹಿಡಿದು ಚಿನ್ನಾಭರಣ ಅಂಗಡಿಗೆ ನುಗ್ಗಿದ ಆಗುಂತಕರು ಏನನ್ನೂ ದೋಚದೆ ವಾಪಸ್ಸು ಹೋದರು!