ಬೆನಗಾನಹಳ್ಳಿ ಜಮೀನು ಹಗರಣ ಮುಚ್ಚಿಸಲು ಶಿವಕುಮಾರ್ ಕೋಟ್ಯಾಂತರ ಹಣ ಖರ್ಚುಮಾಡಿದ್ದಾರೆ: ಕುಮಾರಸ್ವಾಮಿ

|

Updated on: Jul 15, 2024 | 7:11 PM

ಕುಮಾರಸ್ವಾಮಿಯವರು ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬೇರೆ ನಾಯಕರು ವಿರುದ್ಧವೂ ಅರೋಪಗಳನ್ನು ಮಾಡುತ್ತಾರೆ. ಅದರೆ ತಮ್ಮ ಬಹಳಷ್ಟು ಆರೋಪಗಳಿಗೆ ಅವರು ಸೂಕ್ತ ಪುರಾವೆ ದಾಖಲೆ ಒದಗಿಸಲ್ಲ, ಹಾಗಾಗೇ ಅವರು ಮಾಡುವ ಆರೋಪಗಳನ್ನು ಹಿಟ್ ಅಂಡ್ ರನ್ ಕೇಸ್ ಅಂತ ಕರೆಯೋದು.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮತ್ತೊಂದು ಭೂಹಗಣದ ಆರೋಪ ಮಾಡಿದರು. ಮುಖ್ಯಮಂತ್ರಿಯವರು ಮುಡಾದಲ್ಲಿ ಸತ್ತವನ ಹೆಸರಲ್ಲಿ ಡಿನೋಟಿಫಿಕೇಶನ್ ಮಾಡಿಸಿರುವುದು ಒಂದು ಕಡೆಯಾದರೆ ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವನಾಗಿ ಬೆನಗಾನಹಳ್ಳಿ ಎಂಬಲ್ಲಿ ಮತ್ತೊಂದು ಅಕ್ರಮವೆಸಗಿದ್ದಾರೆ. ಭೂಹಗರಣದಲ್ಲಿ ಭಾಗಿಯಾಗಿರುವ ಅವರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವವನಿಗೆ ಅದನ್ನು ವಾಪಸ್ಸು ತೆಗೆದುಕೊಳ್ಳುವಂತೆ ಎಷ್ಟು ಕೋಟಿ ಕೊಟ್ಟಿದ್ದಾರೆ ಅಂತ ಮಾಧ್ಯಮದವರು ಕೇಳಲಿ, ಕೇಸ್ ಹಾಕಿರುವವನು ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದು ತನಗೆ ಚೆನ್ನಾಗಿ ಪರಿಚಯಸ್ಥ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಶಿವಕುಮಾರ್ ಇದುವರೆಗೆ ಹಣ ಮತ್ತು ಅಧಿಕಾರ ದುರಪಯೋಗ ಮಾಡಿಕೊಂಡು ರಾಜಕೀಯ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಸರ್ಕಾರ ಕಸದ ಟೆಂಡರ್ ಕೊಟ್ಟು ಕೋಟಿ ಕೋಟಿ ಲೂಟಿ ಮಾಡಲು ಹೊರಟಿದೆ -ಹೆಚ್​ಡಿ ಕುಮಾರಸ್ವಾಮಿ