Loading video

ಶಿವಕುಮಾರ್ ಒಬ್ಬ ಹಿಂದೂ; ನಾಮ, ವಿಭೂತಿ ಹಚ್ಚಿಕೊಳ್ಳುತ್ತಾರೆ, ಮುನಿರತ್ನಗೇನು ತೊಂದರೆ? ರವಿಕುಮಾರ್ ಗಣಿಗ

Updated on: Apr 19, 2025 | 2:46 PM

ಇಂದು ನಗರದಲ್ಲಿ ದಿಢೀರನೆ ಸುದ್ದಿಗೋಷ್ಠಿಯೊಂದನ್ನು ನಡೆಸಿದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಡಿಸಿಎಂ ಡಿಕೆ ಶಿವಕುಮರ್ ರನ್ನು ಉಗ್ರವಾಗಿ ಟೀಕಿಸಿದರು. ಅವರನ್ನು ಹಗಲೆಲ್ಲ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸುತ್ತಿದ್ದಾರೆ, ಅದನ್ನು ಮುಂದುವರಿಸಿದರೆ ಇನ್ನಷ್ಟು ಅನುಭವಿಸುತ್ತಾರೆ ಎಂದು ಶಾಸಕ ರವಿ ಕುಮಾರ್ ಗಣಿಗ ಹೇಳಿದರು.

ಬೆಂಗಳೂರು, ಏಪ್ರಿಲ್ 19: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಂಡ್ಯದ ಕಾಂಗ್ರೆಸ್ ಶಾಸಕ ರವಿಕಮಾರ್ ಗಣಿಗ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (BJP MLA Munirathna Naidu) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾಡಿದ ಟೀಕೆಗಳಿಗೆ ಪ್ರತಿಕ್ರಿಯಿಸಿದರು. ಶಿವಕುಮಾರ್ ಒಬ್ಬ ಹಿಂದೂ, ಅವರು ಪ್ರಯಾಗ್ ರಾಜ್​ಗೆ ಹೋಗುತ್ತಾರೆ, ಪುಣ್ಯಸ್ನಾನ ಮಾಡುತ್ತಾರೆ, ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ, ಹಣೆಗೆ ವಿಭೂತಿ ಬಳಿದುಕೊಳ್ಳುತ್ತಾರೆ ಮತ್ತು ನಾಮವನ್ನೂ ಹಾಕಿಕೊಳ್ಳುತ್ತಾರೆ, ಅದರಿಂದ ಮುನಿರತ್ನಗೆ ಅಗುತ್ತಿರುವ ನಷ್ಟವೇನು? ಅವರು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲಿ ಎಂದು ಗಣಿಗ ಹೇಳಿದರು.

ಇದನ್ನೂ ಓದಿ:  ಬಿಜೆಪಿ ಭದ್ರಕೋಟೆಯೇ ಡಿಕೆ ಶಿವಕುಮಾರ್ ಟಾರ್ಗೆಟ್: ನೆಲೆ ಇಲ್ಲದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಸಾಫ್ಟ್​ ಹಿಂದುತ್ವದ ಮಂತ್ರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ