ಸಿದ್ದರಾಮಯ್ಯರನ್ನು ಮಟ್ಟ ಹಾಕುವಷ್ಟು ದೊಡ್ಡ ವ್ಯಕ್ತಿ ನಾನಲ್ಲ, ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಅನ್ನು ಕಟ್ಟಿಹಾಕಲಿದೆ: ಬಿವೈ ವಿಜಯೇಂದ್ರ
ಲೋಕಸಭಾ ಚುನಾವಣೆ ಬಳಿಕ ಸಿದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಚಾಮರಾಜನಗರ: ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್ (Congress) ತೆಲೆಕೆಡಿಸಿಕೊಲ್ಳುವ ಅಅವಶ್ಯಕತೆಯಿಲ್ಲ, ನಮ್ಮ ನಡುವೆ ಅದ್ಭುತವಾದ ಸಮನ್ವಯತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ಚಾಮರಾಜನಗರದಲ್ಲಿ ಇಂದು ಹೇಳಿದರು. ಅಸಲಿಗೆ ಕಾಂಗ್ರೆಸ್ ನಾಯಕರು ಗಬರಿಗೊಳಗಾಗಿದ್ದಾರೆ ಮತ್ತು ಗೊಂದಲದಲ್ಲಿದ್ದಾರೆ, ಲೋಕಸಭಾ ಚುನಾವಣೆ ಬಳಿಕ ಸಿದರಾಮಯ್ಯರನ್ನು (Siddaramaiah) ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ, ತನ್ನ ಜೊತೆ ಹಿರಿಯರಾದ ಜಿಟಿ ದೇವೇಗೌಡ, ಅವರ ಮಗ ಹರೀಶ್ ಗೌಡ, ಮಂಜುನಾಥ್ ಮೊದಲಾದವರಿದ್ದಾರೆ. ಮೊನ್ನೆ ಬೆಂಗಳೂರಲ್ಲಿ ಹೆಚ್ ಡಿ ದೇವೇಗೌಡರು ಎರಡೂ ಪಕ್ಷಗಳ ಮುಖಂಡರನ್ನು ಆಶೀರ್ವದಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಸಿದ್ದರಾಮಯ್ಯರನ್ನು ಮಟ್ಟ ಹಾಕುವಷ್ಟು ದೊಡ್ಡ ವ್ಯಕ್ತಿ ತಾನಲ್ಲ, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡರ ಆಶೀರ್ವಾದ ಆನೆ ಬಲ ತಂದಿದೆ: ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ಬಳಿಕ ವಿಜಯೇಂದ್ರ ಹರ್ಷ