1 ನಿಮಿಷದಲ್ಲಿ ನೀವು ಎಷ್ಟು ಇಡ್ಲಿ ತಿನ್ಬಹುದು? ಈತ ತಿಂದಿದ್ದೆಷ್ಟು ಗೊತ್ತಾ?

Updated By: ರಮೇಶ್ ಬಿ. ಜವಳಗೇರಾ

Updated on: Sep 29, 2025 | 8:58 PM

ಶಿವಮೊಗ್ಗದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಇಡ್ಲಿ ಮತ್ತು ಬಾಳೆಹಣ್ಣುಗಳನ್ನು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಹಿಳೆಯರು ಮತ್ತು ಪುರುಷರಿಬ್ಬರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರಷ್ಟೇ ಅಲ್ಲದೇ ಮೆಸ್ಕಾಂ ಸಿಬ್ಬಂದಿಯೂ ಸಹ ಈ ಸ್ಪರ್ಧೆಯನ್ನು ಆನಂದಿಸಿದರು. ಸುತ್ತಮುತ್ತಲಿನ ಜನರು ಜೋರಾಗಿ ಶಿಳ್ಳೆ ಚಪ್ಪಾಳೆಗಳೊಂದಿಗೆ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.

ಶಿವಮೊಗ್ಗ, ಸೆಪ್ಟೆಂಬರ್ 29: ಶಿವಮೊಗ್ಗದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಬಾಳೆ ಹಣ್ಣು ಮತ್ತು ಇಡ್ಲಿ ತಿನ್ನುವ ಸ್ಫರ್ಧೆಯನ್ನು ಏಪ್ಡಿಸಲಾಗಿತ್ತು. ಸಾರ್ವಜನಿಕರು ಸೇರಿದಂತೆ ಮೆಸ್ಕಾಂ ಸಿಬ್ಬಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಈ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು ಸುತ್ತಮುತ್ತಲಿನ ಜನರು ಜೋರಾಗಿ ಶಿಳ್ಳೆ ಚಪ್ಪಾಳೆಗಳೊಂದಿಗೆ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.1 ನಿಮಿಷದ ಅಂತರದಲ್ಲಿ  ಬರೋಬ್ಬರಿ 10 ಇಡ್ಲಿ ತಿಂದು ವ್ಯಕ್ತಿಯೋರ್ವ ವಿಜೇತನಾಗಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.