AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಉಳಿಯೋದು ಬಹುತೇಕ ಕಷ್ಟ? ಆರಂಭದಲ್ಲೇ ವಿಘ್ನ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಉಳಿಯೋದು ಬಹುತೇಕ ಕಷ್ಟ? ಆರಂಭದಲ್ಲೇ ವಿಘ್ನ

ಮದನ್​ ಕುಮಾರ್​
|

Updated on: Sep 29, 2025 | 8:12 PM

Share

ಬಿಗ್ ಬಾಸ್ ಆಟದಲ್ಲಿ ಉಳಿದುಕೊಳ್ಳಲು ಬಹಳ ಕಷ್ಟಪಡಬೇಕು. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶುರುವಿನಲ್ಲೇ ಎಲ್ಲರಿಗೂ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ಒಬ್ಬರಿಗೇ ಗೇಟ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ. ಯಾರು ಉಳಿದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರೋಮೋದಲ್ಲಿದೆ ಅದರ ಝಲಕ್.

ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ತುಂಬಾ ಕಷ್ಟಪಡಬೇಕು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆರಂಭದಲ್ಲೇ ಎಲ್ಲರಿಗೂ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ಒಬ್ಬರಿಗೇ ಗೇಟ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ. ಯಾರು ಉಳಿದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ತಮ್ಮ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಮೊದಲು ಎಲಿಮಿನೇಟ್ ಆಗುವುದು ಯಾರು ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ರಕ್ಷಿತಾ ಶೆಟ್ಟಿ (Rakshitha Shetty), ಮಾಳು ನಿಪನಾಳ, ಸ್ಪಂದನಾ ಮುಂತಾದವರು ಇನ್ನುಳಿದ ಸ್ಪರ್ಧಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ. ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಹೆಚ್ಚು ಕಷ್ಟಪಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.