ಮತಾಂತರಕ್ಕೆ ಅವಕಾಶ ಇದೆ: ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಒಕ್ಕಲಿಗ, ಕ್ರೈಸ್ತ ಕುರುಬ ಕಲಂಗೆ ತಂಗಡಗಿ ಸ್ಪಷ್ಟನೆ

Updated on: Sep 15, 2025 | 4:51 PM

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಇದೇ ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಮತ್ತೆ ಜಾತಿ ಗಣತಿ ನಡೆಯುತ್ತಿದ್ದು ,ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಕಲಂ ವಿವಾದಕ್ಕೆ ಸಚಿವ ಶಿವರಾಜ್ ತಂಗಡಿಗಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಕಾನೂನಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಆದರೆ ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ವಿರೋಧ ಇದೆ. ಅವರವರ ವಯಕ್ತಿಕವಾಗಿ ಮತಾಂತರವಾಗಲು ಸ್ವಾತಂತ್ರ್ಯ ಇದೆ. ನಾವ್ಯಾಕೆ ಬಿಜೆಪಿಯವರು ಹೇಳದಂಗೆ ಕೇಳಬೇಕು. ಅವರ ಜಾತಿ ಬರೆಸಲು ಸ್ವತಂತ್ರರದಿದ್ದಾರೆ. ನಾವ ಯಾರಿಗೂ ಇದನ್ನ ಬರೆಸಬೇಕೆಂದು ಹೇಳೀಲ್ಲ. ಕೆಲವರು ಕುರುಬ ಕ್ರಿಶ್ಚಿಯನ್ ಎಂದು ಬರೆಸಿದಾರೆ,ಲಿಂಗಾಯತ ಕ್ರಿಶ್ಚಿಯನ್ ಎಂದು ಬರೆಸಿದಾರೆ ಎಂದು ಸ್ಪಷ್ಟಪಿಸಿದರು.

ಕೊಪ್ಪಳ (ಸೆಪ್ಟೆಂಬರ್ 15): ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಇದೇ ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಮತ್ತೆ ಜಾತಿ ಗಣತಿ ನಡೆಯುತ್ತಿದೆ.‌ ಸುಮಾರು 1.75 ಲಕ್ಷ ಗಣತಿದಾರರ ಮೂಲಕ, ತಂತ್ರಜ್ಞಾನ ಬಳಸಿಕೊಂಡು ಕರಾರುವಾಕ್ ಹಾಗೂ ಜಾಗ್ರತೆಯಿಂದ ಸಮೀಕ್ಷೆ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ. 16 ದಿನಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಆದ್ರೆ, ಈ ಗಣತಿ ಪ್ರಾರಂಭಕ್ಕೂ ವಿವಾದ ಭುಗಿಲೆದ್ದಿದೆ. ಸಮೀಕ್ಷೆಯಲ್ಲಿ ಕೆಲವು ಮತಾಂತರಕ್ಕೆ ಸಂಬಂಧಿಸಿದಂತೆ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಕಾನೂನಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಆದರೆ ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ವಿರೋಧ ಇದೆ. ಅವರವರ ವಯಕ್ತಿಕವಾಗಿ ಮತಾಂತರವಾಗಲು ಸ್ವಾತಂತ್ರ್ಯ ಇದೆ. ನಾವ್ಯಾಕೆ ಬಿಜೆಪಿಯವರು ಹೇಳದಂಗೆ ಕೇಳಬೇಕು. ಅವರ ಜಾತಿ ಬರೆಸಲು ಸ್ವತಂತ್ರರದಿದ್ದಾರೆ. ನಾವ ಯಾರಿಗೂ ಇದನ್ನ ಬರೆಸಬೇಕೆಂದು ಹೇಳೀಲ್ಲ. ಕೆಲವರು ಕುರುಬ ಕ್ರಿಶ್ಚಿಯನ್ ಎಂದು ಬರೆಸಿದಾರೆ,ಲಿಂಗಾಯತ ಕ್ರಿಶ್ಚಿಯನ್ ಎಂದು ಬರೆಸಿದಾರೆ ಎಂದು ಸ್ಪಷ್ಟಪಿಸಿದರು.

ಕಾಂತರಾಜು ವರದಿಗೆ 10 ವರ್ಷ ಆದ ಹಿನ್ನೆಲೆ ಆ ವರದಿ ಕೈಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ ಸಮೀಕ್ಷೆ ಮಾಡಿಸುತ್ತಿದ್ದೇವೆ. ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ. ಮಧುಸೂದನ್ ನಾಯ್ಕ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆವು. ಎಲ್ಲವನ್ನೂ ಕೂಲಂಕಷವಾಗಿ ಹೊಸ ಟೆಕ್ನಾಲಜಿ ಪ್ರಕಾರ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಿದರು.