ಮದ್ದೂರು ಕಲ್ಲು ತೂರಾಟ ಪ್ರಕರಣ ಪ್ರಸ್ತಾಪಿಸಿ ಮುಸ್ಲಿಂ ಯುವಕರಿಗೆ ದೇಶ ಪ್ರೇಮ ಪಾಠ ಮಾಡಿದ ನಲಪಾಡ್
ಬೆಂಗಳೂರು ಬ್ಯಾರಿ ಜಮಾತ್ ವತಿಯಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಕರ್ನಾಟಕ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಮದ್ದೂರು ಕಲ್ಲು ತೂರಾಟ ಪ್ರಕರಣವನ್ನು ಪ್ರಸ್ತಾಪಿಸಿ ಮುಸ್ಲಿ ಸಮುದಾಯಕ್ಕೆ ದೇಶ ಪ್ರೇಮದ ಪಾಠ ಮಾಡಿದ್ದಾರೆ. ಕನಕನಗರದ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಲಪಾಡ್, ಮದ್ದೂರಿನಲ್ಲಾದ ಕಲ್ಲು ತೂರಾಟ ಪ್ರಕರಣ ಪ್ರಸ್ತಾಪಿಸಿದ್ದು, ಯಾವುದೇ ಕಾರಣಕ್ಕೂ ಭಾವುಕರಾಗಬೇಡಿ. ನಾವೆಲ್ಲರೂ ಮೊದಲು ಭಾರತೀಯರು. ನಾವೆಲ್ಲರೂ ಸಂವಿಧಾನವನ್ನು ಜೊತೆಗೆ ಇಟ್ಟುಕೊಂಡು ಹೋಗಬೇಕು ಎಂದು ಮುಸ್ಲಿಂ ಯುವಕರಿಗೆ ಕಿವಿಮಾತು ಹೇಳಿದರು.
ಬೆಂಗಳೂರು, (ಸೆಪ್ಟೆಂಬರ್ 15): ಬೆಂಗಳೂರು ಬ್ಯಾರಿ ಜಮಾತ್ ವತಿಯಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಕರ್ನಾಟಕ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಮದ್ದೂರು ಕಲ್ಲು ತೂರಾಟ ಪ್ರಕರಣವನ್ನು ಪ್ರಸ್ತಾಪಿಸಿ ಮುಸ್ಲಿ ಸಮುದಾಯಕ್ಕೆ ದೇಶ ಪ್ರೇಮದ ಪಾಠ ಮಾಡಿದ್ದಾರೆ. ಕನಕನಗರದ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಲಪಾಡ್, ಮದ್ದೂರಿನಲ್ಲಾದ ಕಲ್ಲು ತೂರಾಟ ಪ್ರಕರಣ ಪ್ರಸ್ತಾಪಿಸಿದ್ದು, ಯಾವುದೇ ಕಾರಣಕ್ಕೂ ಭಾವುಕರಾಗಬೇಡಿ. ನಾವೆಲ್ಲರೂ ಮೊದಲು ಭಾರತೀಯರು. ನಾವೆಲ್ಲರೂ ಸಂವಿಧಾನವನ್ನು ಜೊತೆಗೆ ಇಟ್ಟುಕೊಂಡು ಹೋಗಬೇಕು ಎಂದು ಮುಸ್ಲಿಂ ಯುವಕರಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಸಯ್ಯದ್ ಮೊಹಮ್ಮದ್ ಅಕ್ರಮ್ ಅಲಿ ತಂಗಳ್, ಹುಸೈನ್ ದಾರಿಮಿ ರೆಂಜಿಲಾಡಿ, ಹಂಜ ಫೈಜಿ ತೋಡಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಇನ್ನು ಇದೇ ವೇಳೆ ಬ್ಯಾರಿ ಇಲ್ಮ್ ಸೆಂಟರ್ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನಸೆಳೆಯಿತು.

