Duniya Vijay: ‘ಭೀಮ’ ಸೆಟ್ಗೆ ಭೇಟಿ ನೀಡಿ ದುನಿಯಾ ವಿಜಯ್ಗೆ ವಿಶ್ ಮಾಡಿದ ಶಿವಣ್ಣ-ಗೀತಾ ದಂಪತಿ
Bhima Kannada Movie: ದುನಿಯಾ ವಿಜಯ್ ನಟನೆಯ ‘ಭೀಮ’ ಚಿತ್ರದ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಮೈಸೂರಿನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
ನಟ ದುನಿಯಾ ವಿಜಯ್ (Duniya Vijay) ಅವರು ‘ಸಲಗ’ ಚಿತ್ರದ ಯಶಸ್ಸಿನ ಬಳಿಕ ‘ಭೀಮ’ (Bhima) ಚಿತ್ರವನ್ನು ಕೈಗೆತ್ತಿಕೊಂಡರು. ಆ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುವ ವೇಳೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಹಾಗೂ ಗೀತಾ ಶಿವರಾಜ್ಕುಮಾರ್ ಅವರು ‘ಭೀಮ’ ಸೆಟ್ಗೆ ಭೇಟಿ ನೀಡಿದ್ದಾರೆ. ವಿಜಯ್ ಜೊತೆ ಕುಳಿತು ಒಂದಷ್ಟು ಹೊತ್ತು ಮಾತನಾಡಿದ್ದಾರೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಶಿವಣ್ಣ-ಗೀತಾ ದಂಪತಿ ವಿಶ್ ಮಾಡಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ.
Published on: Oct 18, 2022 04:02 PM