‘ನಾವು ಕೂಡ ಹಸು ಸಾಕ್ತೀವಿ’; ಮುಂದಿನ ಯೋಜನೆ ರಿವೀಲ್ ಮಾಡಿದ ಶಿವಣ್ಣ

|

Updated on: Aug 02, 2023 | 12:55 PM

ರಾಜ್​ಕುಮಾರ್ ಅವರು ರಾಯಭಾರಿ ಆದ ಸಂದರ್ಭದಲ್ಲಿ ನಂದಿನಿ ಸಂಸ್ಥೆಯವರು ಹಸುವನ್ನು ಅಣ್ಣಾವ್ರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಶಿವಣ್ಣ ಕೂಡ ಹಸು ಸಾಕುವ ಪ್ಲ್ಯಾನ್​ನಲ್ಲಿದ್ದಾರೆ.

ಡಾ. ರಾಜ್​ಕುಮಾರ್ (Rajkumar) ಅವರು ನಂದಿನಿ ಪ್ರಾಡಕ್ಟ್​​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದರು. ರೈತರಿಗೆ ಸಹಕಾರಿ ಆಗುತ್ತದೆ ಎನ್ನುವ ಕಾರಣಕ್ಕೆ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ. ಪುನೀತ್ ರಾಜ್​ಕುಮಾರ್ ಕೂಡ ಹಾಗೆಯೇ ಮಾಡಿದ್ದರು. ಅವರು ಕೂಡ ನಂದಿನಿ ಪ್ರಾಡಕ್ಟ್​ ಜಾಹೀರಾತಿಗೆ ಹಣ ಪಡೆದಿಲ್ಲ. ಈಗ ಶಿವಣ್ಣ ಅವರು ಉಚಿತವಾಗಿ ಈ ಬ್ರ್ಯಾಂಡ್​ನ ಪ್ರಚಾರ ಮಾಡುತ್ತಿದ್ದಾರೆ. ರಾಜ್​ಕುಮಾರ್ ಅವರು ರಾಯಭಾರಿ ಆದ ಸಂದರ್ಭದಲ್ಲಿ ನಂದಿನಿ ಸಂಸ್ಥೆಯವರು ಹಸುವನ್ನು ಅಣ್ಣಾವ್ರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಶಿವಣ್ಣ (Shivarajkumar) ಕೂಡ ಹಸು ಸಾಕುವ ಪ್ಲ್ಯಾನ್​ನಲ್ಲಿದ್ದಾರೆ. ‘ಕನಕಪುರದಲ್ಲಿ ಫಾರ್ಮ್​ಹೌಸ್ ಖರೀದಿಸಿದ್ದೇನೆ. ಅಲ್ಲಿ ಹಸು ಸಾಕುವ ಆಲೋಚನೆ ಇದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Aug 02, 2023 12:54 PM