‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಶಿವರಾಜ್ಕುಮಾರ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಹೊಸ ಸಿನಿಮಾಗಳ ಬೆಂಬಲಕ್ಕೆ ಅವರು ನಿಂತಿದ್ದಾರೆ. ಅವರು ಈಗ ಕಾಲಾಪತ್ಥರ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ವಿಶೇಷ ಉಡುಗೊರೆ ಒಂದು ಸಿಕ್ಕಿದೆ.
‘ಕಾಲಾಪತ್ಥರ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ವಿಕ್ಕಿ ವರುಣ್ ಹಾಗೂ ಧನ್ಯಾ ರಾಮ್ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಶಿವರಾಜ್ಕುಮಾರ್ ಅವರಿಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಶಿವರಾಜ್ಕುಮಾರ್ ಅವರ ಎದರು ಹೂವಿನ ಬುಟ್ಟಿ ತಂದು ಇಡಲಾಯಿತು. ಇದರ ಮಧ್ಯೆ ಬೆಳ್ಳಿ ಗದೆ ಇಡಲಾಗಿತ್ತು. ಇದನ್ನು ತೆಗೆದುಕೊಂಡು ಶಿವಣ್ಣ ಪೋಸ್ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos