ಅತೀ ದುಡ್ಡು ಸಿಗುತ್ತದೆ ಎಂದು ಆಸೆ ಪಡೋಕೆ ಹೋಗ್ಬಾರದು; ಥಿಯೇಟರ್ನವರಿಗೆ ಶಿವಣ್ಣ ಕಿವಿಮಾತು
ಕೆಲವು ಕಡೆಗಳಲ್ಲಿ ‘ಜೇಮ್ಸ್’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಂತಹ ಕಡೆಗಳಲ್ಲೂ ಸಿನಿಮಾವನ್ನು ತೆಗೆಯಲಾಗುತ್ತಿದೆ. ಈ ಬಗ್ಗೆ ನಟ ಶಿವರಾಜ್ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ
‘ಜೇಮ್ಸ್’ ಸಿನಿಮಾಗೆ (James Movie) ಸಂಕಷ್ಟ ಎದುರಾಗಿದೆ. ಪರಭಾಷೆಯ ಚಿತ್ರಗಳ ಹಾವಳಿಯಿಂದ ಸಿನಿಮಾಗೆ ಸಿಕ್ಕಿರುವ ಥಿಯೇಟರ್ಗಳು ಕೈತಪ್ಪುತ್ತಿವೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರ ಮಾರ್ಚ್ 25ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾದ ಅಬ್ಬರದಿಂದ ‘ಜೇಮ್ಸ್’ ಚಿತ್ರಕ್ಕೆ (James Movie) ತೊಂದರೆ ಆಗುತ್ತಿದೆ. ಚಿತ್ರತಂಡ ಕೂಡ ಈ ಬಗ್ಗೆ ಅಳಲು ತೊಡಿಕೊಂಡಿದೆ. ಕೆಲವು ಕಡೆಗಳಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಂತಹ ಕಡೆಗಳಲ್ಲೂ ಸಿನಿಮಾವನ್ನು ತೆಗೆಯಲಾಗುತ್ತಿದೆ. ಈ ಬಗ್ಗೆ ನಟ ಶಿವರಾಜ್ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ‘ಸಿನಿಮಾ ಚೆನ್ನಾಗಿ ಹೋಗುತ್ತಿರುವ ಸಂದರ್ಭದಲ್ಲಿ ಅದನ್ನು ತೆಗೆಯಬಾರದು. ಅದು ಯಾವುದೇ ಚಿತ್ರವಾಗಿದ್ದರೂ ಅವರ ಪರವಾಗಿ ನಿಲ್ಲಬೇಕು. ಅತೀ ಹಣ ಸಿಗುತ್ತದೆ ಎಂದು ಚಿತ್ರಮಂದಿರದವರು ಆಸೆ ಪಡೋಕೆ ಹೋಗಬಾರದು’ ಎಂದು ಕಿವಿ ಮಾತು ಹೇಳಿದ್ದಾರೆ ಶಿವಣ್ಣ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್ಕುಮಾರ್ ಹೇಳಿಕೆ
ಪ್ರಿಯಕರನ ಜತೆ ಇದ್ದಾಗಲೂ ‘ಆರ್ಆರ್ಆರ್’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್; ವಿಡಿಯೋ ವೈರಲ್