ಸೆಲಿಬ್ರಿಟಿಗಳು ನಿಶ್ಚಿತಾರ್ಥಕ್ಕೆ ತೊಡಿಸುವ ಉಂಗುರಗಳ ಬೆಲೆ ಎಷ್ಟು ಅಂತ ಗೊತ್ತಾದರೆ ನೀವು ದಂಗಾಗುತ್ತೀರಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2021 | 10:52 PM

ತನಗೆ ಒಂದು ಮಾತೂ ತಿಳಿಸದೆ ಒಂದು ದಿನದ ಪಂದ್ಯಗಳಿಗೆ ನಾಯಕತ್ವದಿಂದ ಸರಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಭುಸುಗುಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ಮನದನ್ನೆ ಅನುಷ್ಕಾ ಶರ್ಮಾಗೆ ನಿಶ್ಚಿತಾರ್ಥಕ್ಕೆ ತೊಡಿಸಿದ ರಿಂಗಿನ ಕಿಮ್ಮತ್ತು ಬರೋಬ್ಬರಿ ಒಂದು ಕೋಟಿ ರೂ.

ಸೆಲಿಬ್ರಿಟಿಗಳ ಮದುವೆಯಲ್ಲಿ ಎಲ್ಲ ಅದ್ದೂರಿಯೇ. ಲಕ್ಷ ಲಕ್ಷ ಬೆಲೆಬಾಳುವ ಉಡುಪುಗಳು, ಕೋಟಿ ರೂಪಾಯಿಗಳ ಆಭರಣಗಳು, ಮದುವೆ (ರಿಸಿಪ್ಷನ್) ನಡೆಯುವ ವೈಭವೋಪೇತ ಹೋಟೆಲ್ಗಳು, ಭವ್ಯ ಕಾರುಗಳು, ಅರ್ಧಗಂಟೆ ಓದಿದರೂ ಮುಗಿಯದ ಮೆನು ಲಿಸ್ಟ್ ಎಲ್ಲ ಅದ್ದೂರಿಯೇ! ಮದುವೆಗೆ ಮೊದಲು ನಡೆಯುವ ನಿಶ್ಚಿತಾರ್ಥ ಸಮಾರಂಭಕ್ಕೂ ಅದೇ ರೀತಿಯ ಖರ್ಚು. ಅಂದಹಾಗೆ ಎಂಗೇಜ್ಮೆಂಟ್ನಲ್ಲಿ ಹುಡುಗ ತಾನು ವರಿಸಲಿರುವ ಕನ್ಯೆಗೆ ಉಂಗುರ ತೊಡಿಸುತ್ತಾನೆ. ಮೊದಲೆಲ್ಲ ಕೇವಲ ಹುಡುಗ ಮಾತ್ರ ರಿಂಗ್ ತೊಡಿಸುತ್ತಿದ್ದ ಅದರೆ ಈಗ ಜಮಾನಾ ಬದಲಾಗಿದೆ. ಯಾರೋ ಉಳ್ಳವನ ಮಗಳೊಬ್ಬಳು ತಾನು ಸಹ ನಿಶ್ಚಿತಾರ್ಥ ದಿನದಂದು ಹುಡುಗನಿಗೆ ರಿಂಗ್ ತೊಡಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಳು. ಅಂದಿನಿಂದ ಬಹಳಷ್ಟು ಕುಟುಂಬಗಳು ಈ ಸಂಪ್ರದಾಯವನ್ನೇ ಪಾಲಿಸುತ್ತಿವೆ.

ಓಕೆ, ವಿಷಯಕ್ಕೆ ಬರುವ. ಕಳೆದ ವಾರ ಬಾಲಿವುಡ್ ನಟ ವಿಕ್ಕಿ ಕೌಶಲ್ ನಟಿ ಕತ್ರೀನಾ ಕೈಫ್ರನ್ನು ಮದುವೆಯಾದರು. ನಿಶ್ಚಿತಾರ್ಥ ದಿನದಂದು ವಿಕ್ಕಿ, ಕತ್ರೀನಾ ಬೆರಳಿಗೆ ತೊಡಿಸಿದ ಉಂಗುರದ ಬೆಲೆ ಸುಮಾರು ಏಳೂವರೆ ಲಕ್ಷ ರೂಪಾಯಿಗಳು. ಅಬ್ಬಾ ಅಂತ ಈಗಲೇ ಉದ್ಗರಿಸಬೇಡಿ ಮಾರಾಯ್ರೇ, ಕತೆಯ ಮುಂದಿನ ಭಾಗದಲ್ಲಿ ನೀವು ಅಬ್ಬಾಬ್ಬಾ ಅನ್ನಬೇಕಿದೆ.

ತನಗೆ ಒಂದು ಮಾತೂ ತಿಳಿಸದೆ ಒಂದು ದಿನದ ಪಂದ್ಯಗಳಿಗೆ ನಾಯಕತ್ವದಿಂದ ಸರಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಭುಸುಗುಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ಮನದನ್ನೆ ಅನುಷ್ಕಾ ಶರ್ಮಾಗೆ ನಿಶ್ಚಿತಾರ್ಥಕ್ಕೆ ತೊಡಿಸಿದ ರಿಂಗಿನ ಕಿಮ್ಮತ್ತು ಬರೋಬ್ಬರಿ ಒಂದು ಕೋಟಿ ರೂ.

ಪ್ರಿಯಾಂಕಾ ಚೋಪ್ರಾರನ್ನು ವರಿಸಿದ ನಿಕ್ ಜೋನಾಸ್ ವಿಶ್ವಸುಂದರಿಗೆ ರೂ. 1.45 ಕೋಟಿ ಬೆಲೆಯ ಉಂಗುರ ತೊಡಿಸಿದರು. ಹಾಗೆಯೇ ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆಯನ್ನು ವರಿಸಿದ ರಣವೀರ್ ಸಿಂಗ್ ರೂ. 2.5 ಕೋಟಿ ಬೆಲೆಯ ಉಂಗುರ ತೊಡಿಸಿದ್ದರು.

2009 ರಲ್ಲಿ ನಮ್ಮ ಬಂಟರ ಪೆಣ್ ಶಿಲ್ಪಾ ಶೆಟ್ಟಿಯನ್ನು ವರಿಸಿದ ಉದ್ಯಮಿ ರಾಜ್ ಕುಂದ್ರಾ ರೂ. 3 ಕೋಟಿ ಬೆಲೆಯ ಉಂಗುರ ತೊಡಿಸಿದ್ದರು.

ಮೈಕ್ರೊ ಮ್ಯಾಕ್ಸ್ ಫೋನ್ ಗೊತ್ತಲ್ಲ, ಅದರ ಮಾಲೀಕರಲ್ಲಿ ಒಬ್ಬರಾಗಿರುವ ರಾಹುಲ್ ಶರ್ಮ ಮದುವೆಯಾಗಿದ್ದು ಬಾಲಿವುಡ್​ನಲ್ಲಿ ಮಿಂಚಿದ ದಕ್ಷಿಣದ ನಟಿ ಆಸಿನ್ ಅವರನ್ನು. ಅಂದಹಾಗೆ, ಶರ್ಮ ತೊಡಿಸಿದ ಉಂಗುರದ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 6 ಕೋಟಿ ರೂ.

ಈಗ ಅಬ್ಬಬ್ಬಾ ಅನ್ನಿ ಮಾರಾಯ್ರೇ!

ಇದನ್ನೂ ಓದಿ:   Fact Check ಆಕಾಶದಲ್ಲಿಯೇ ಹೊತ್ತಿ ಉರಿಯುತ್ತಿರುವ ಹೆಲಿಕಾಪ್ಟರ್; ಬಿಪಿನ್ ರಾವತ್ ಪ್ರಯಾಣಿಸಿದ್ದ ಹೆಲಿಕಾಪ್ಟರ್ ಪತನದ ವಿಡಿಯೊ ಇದಲ್ಲ