Loading video

ರಾಮನ ಮೇಲೆ ಒಂದು ಪಕ್ಷದ ಮಾಲೀಕತ್ವ ನಡೆಯಲು ಸಾಧ್ಯವೇ?: ಮೋದಿ

|

Updated on: May 03, 2024 | 9:59 AM

ದೇವರ ಮೇಲೆ ಯಾರಾದರೂ ಹಕ್ಕು, ಅಧಿಕಾರ ಚಲಾಯಿಸಲು ಸಾಧ್ಯವೇ, ರಾಮ ಎಲ್ಲರಿಗೂ ಸೇರಬೇಕಾದವನು. ಪ್ರತಿಪಕ್ಷಗಳು ತನ್ನ ಹಿಡನ್ ಅಜೆಂಡಾಕ್ಕೆ ಪರದೆ ಹಾಕಲು ನೋಡುತ್ತಿದೆ, ವೋಟ್​ ಬ್ಯಾಂಕ್​ನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಶ್ರೀರಾಮ ಎಲ್ಲರ ದೇವರು, ಆತನ ಮೇಲೆ ಯಾವೊಂದು ಪಕ್ಷದ ಮಾಲೀಕತ್ವ ನಡೆಯಲು ಸಾಧ್ಯವೇ? ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಶ್ನಿಸಿದ್ದಾರೆ. ಟಿವಿ9 ನೆಟ್​ವರ್ಕ್​ ಜತೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಮೋದಿ, ರಾಮ ಎಲ್ಲರಿಗೂ ಸೇರಬೇಕಾದವನು. ಪ್ರತಿಪಕ್ಷಗಳು ತನ್ನ ಹಿಡನ್ ಅಜೆಂಡಾಕ್ಕೆ ಪರದೆ ಹಾಕಲು ನೋಡುತ್ತಿದೆ, ವೋಟ್​ ಬ್ಯಾಂಕ್​ನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ.
ಒಂದೊಮ್ಮೆ ಅವರು ರಾಮ ಮಂದಿರಕ್ಕೆ ಭೇಟಿ ನೀಡಿದರೆ ವೋಟ್​ ಬ್ಯಾಂಕ್​ ಅವರಿಂದ ದೂರವಾಗುತ್ತದೆ ಎನ್ನುವ ಭಯ ಅವರಿಗಿದೆ.

ರಾಜೀವ್​ ಗಾಂಧಿ ಒಂದು ಬಾರಿ ಅಯೋಧ್ಯೆಯಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಆಗ ಕೆಲವರ ಮಾತಿನಿಂದಾಗಿ ಅಲ್ಲಿಂದ ಓಡಿಹೋಗಿದ್ದರು.

ಈ ಮೊದಲು ವಿಪಕ್ಷಗಳು ಚುನಾವಣಾ ಪ್ರಚಾರಕ್ಕೂ ಮುನ್ನ ದೇವರ ಮೊರೆ ಹೋಗುತ್ತಿದ್ದರು, ಆದರೆ ಆಗ ಮತ ಬ್ಯಾಂಕ್ ಇವರಿಗೆ ನೀವು ಕೂಡ ದೇವರ ಮೊರೆ ಹೋದರೆ ನಿಮಗೂ ಮೋದಿಗೂ ಏನು ವ್ಯತ್ಯಾಸ ಇರುತ್ತೆ ಎಂದು ಪ್ರಶ್ನೆ ಕೇಳಿರಬೇಕು. ಹಾಗಾಗಿಯೇ ಅವರು ದೇವಸ್ಥಾನಕ್ಕೆ ಹೋಗುತ್ತಿಲ್ಲ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ