ಬಸನಗೌಡ ಯತ್ನಾಳ್ ಈಗಾಗಲೇ ಸಿಎಂ ಆಗಿದ್ದಾರೆ-ಕಾಮಿಡಿ ಮುತ್ಯಾ: ಶ್ವಾಸಗುರು ವಚನಾನಂದ ಸ್ವಾಮೀಜಿ

ಬಸನಗೌಡ ಯತ್ನಾಳ್ ಈಗಾಗಲೇ ಸಿಎಂ ಆಗಿದ್ದಾರೆ-ಕಾಮಿಡಿ ಮುತ್ಯಾ: ಶ್ವಾಸಗುರು ವಚನಾನಂದ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 06, 2024 | 10:36 AM

ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತಾಡಿದ ಅವರು, ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದ್ದು ತಮ್ಮ ಸಮುದಾಯಕ್ಕೆ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಅಗ್ರಹಿಸಲಾಗಿದೆ ಎಂದು ಹೇಳಿದರು.

ದಾವಣಗೆರೆ: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇತ್ತೀಚಿಗೆ ಹರಿಹರ-ದಾವಣಗೆರೆ ಪಂಚಮಸಾಲಿ ಪೀಠದ (Harihar-Davanagere Panchamasali Peetha) ಜಗದ್ಗುರು ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಗಳ (Vachananda Swamiji) ವಿರುದ್ಧ ಟೀಕೆ ಮಾಡಿದ್ದರು. ಶ್ರೀಗಳು ಯತ್ನಾಳ್ ರನ್ನು ಲೇವಡಿ ಮಾಡುತ್ತಾ ಅವರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಚನಾನಂದ ಸ್ವಾಮಿಗಳು, ಹಿಂದೆ ಒಬ್ಬರು ಲಡ್ಡು ಮುತ್ಯಾ ಅಂತ ಒಬ್ಬರಿದ್ದರು, ಯತ್ನಾಳ್ ಮುತ್ಯಾ ಕೂಡ ಅವರ ಹಾಗೆ. ಏನೇನೋ ಹೇಳಿಕೊಂಡು ತಿರುಗಾಡುತ್ತಾ ಇರ್ತಾರೆ. ತಾನು ಸಿಎಂ ಆಗ್ತೀನಿ ಅನ್ನುತ್ತಾರೆ, ಅದರೆ ಅವರು ಈಗಾಗಲೇ ಸಿಎಂ ಆಗಿದ್ದಾರೆ-ಸಿಎಂ ಅಂದರೆ ಕಾಮಿಡಿ ಮುತ್ಯಾ! ಮುಂದೆ ಹೆಚ್ ಎಂ ಆಗಲಿದ್ದಾರೆ- ಹುಚ್ಚು ಮತ್ಯಾ! ಕೊನೆಗೆ ಪಿಎಂ ಕೂಡ ಆಗಲಿದ್ದಾರೆ-ಪಾಗಲ್ ಮುತ್ಯಾ! ಎಂದು ಶ್ರೀಗಳು ಹೇಳಿದರು. ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತಾಡಿದ ಅವರು, ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದ್ದು ತಮ್ಮ ಸಮುದಾಯಕ್ಕೆ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಅಗ್ರಹಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆಂಜನೇಯ ಅವಿವೇಕಿ, ಸಿದ್ದರಾಮಯ್ಯನವರನ್ನೇ ಪೂಜಿಸಲಿ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ