ಜನಾರ್ದನ ಪೂಜಾರಿಗೆ ಕೈ ಕೊಟ್ಟ ಸಿದ್ದರಾಮಯ್ಯ, ಮೊಣಕಾಲು ಮುಟ್ಟಿ ನಮಸ್ಕರಿಸಿದ ಡಿಕೆಶಿ
ಜನಾರ್ದನ ಪೂಜಾರಿ ಅವರಿಗೆ ಸಿದ್ದರಾಮಯ್ಯ ಕೈ ಕೊಟ್ಟ ನಮಸ್ಕರಿಸಿದರು. ಇನ್ನು ಡಿಕೆ ಶಿವಕುಮಾರ್ ಅವರು ಜನಾರ್ದನ ಪೂಜಾರಿಯವರ ಮೊಣಕಾಲು ಮುಟ್ಟಿ ಕೈ ಮುಗಿದರು.
ಮಂಗಳೂರು: ಕಾಂಗ್ರೆಸ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್ ರಾಜ್ಯದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಿದೆ. ಇಂದು(ಜನವರಿ 22) ಮಂಗಳೂರಿನಲ್ಲಿ ಪ್ರಜಾಧ್ವನಿ ಸಮಾವೇಶ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಭಾಗವಹಿಸಿರುವುದು ವಿಶೇಷ. ಇನ್ನು ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತುಕೊಂಡಿದ್ದ ಜನಾರ್ದನ ಪೂಜಾರಿ ಅವರಿಗೆ ಸಿದ್ದರಾಮಯ್ಯ ಕೈ ಕೊಟ್ಟ ನಮಸ್ಕರಿಸಿದರು. ಇನ್ನು ಡಿಕೆ ಶಿವಕುಮಾರ್ ಅವರು ಜನಾರ್ದನ ಪೂಜಾರಿಯವರ ಮೊಣಕಾಲು ಮುಟ್ಟಿ ಕೈ ಮುಗಿದರು.