Bidar Boy: ಲಂಡನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಿಂದ ಸ್ನಾತಕೋತ್ತರ ಪದವಿ ಪಡೆದ ಯುವಕ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿದ!

Bidar Boy: ಲಂಡನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಿಂದ ಸ್ನಾತಕೋತ್ತರ ಪದವಿ ಪಡೆದ ಯುವಕ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 23, 2023 | 11:48 AM

ಆಧಿಶ್ ಪದವಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಅಂದರೆ ಘಟಿಕೋತ್ಸವ ಸಮಾರಂಭದಲ್ಲಿ ಮೊದಲು ಕನ್ನಡ ನಾಡಿನ ಬಾವುಟ ಎರಡೂ ಕೈಗಳಿಂದ ಎತ್ತಿ ಹಿಡಿದು ಆಮೇಲೆ ಸರ್ಟಿಫಿಕೇಟ್ ಸ್ವೀಕರಿಸುತ್ತಾರೆ.

ಬೆಂಗಳೂರು:  ನಮ್ಮ ಕನ್ನಡದ ಹುಡುಗ ಆಧಿಶ್ ರಜನೀಶ್ ವಾಲಿಗೆ (Adhish Rajinish Wali) ಕನ್ನಡ ನಾಡಿನ (Karnataka) ಮೇಲಿರುವ ಪ್ರೀತಿ ಅಭಿಮಾನ ಭಾವುಕರಾಗಿಸುತ್ತದೆ. ಬೀದರ್ ಜಿಲ್ಲೆಯ ಈ ಯುವಕ ಸಿಟಿ ಯೂನಿರ್ವಸಿಟಿ ಆಫ್ ಲಂಡನ್ ನ (City University Of London) ಬೇಸ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಿಂದ ಮಾಸ್ಟರ್ಸ್ ಪದವಿ ಪಡೆದಿದ್ದು ಪದವಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಅಂದರೆ ಘಟಿಕೋತ್ಸವ ಸಮಾರಂಭದಲ್ಲಿ ಮೊದಲು ಕನ್ನಡ ನಾಡಿನ ಬಾವುಟ ಎರಡೂ ಕೈಗಳಿಂದ ಎತ್ತಿ ಹಿಡಿದು ಆಮೇಲೆ ಸರ್ಟಿಫಿಕೇಟ್ ಸ್ವೀಕರಿಸುತ್ತಾರೆ. ಅದಕ್ಕೂ ಮೊದಲು ಆಧಿಶ್ ವೇದಿಕೆಯ ಬಾಲಿವುಡ್ ನಟ ಶಾರುಖ್ ಖಾನ್ ಅವರ ಸಿಗ್ನೇಚರ್ ಸ್ಟೈಲ್ ಪ್ರದರ್ಶಿಸುತ್ತಾರೆ. ಕನ್ನಡ ನಾಡಿನ ಕುವರನಿಗೆ ಬದುಕಿನಲ್ಲಿ ಎಲ್ಲ ಒಳ್ಳೆಯದಾಗಲಿ ಮತ್ತು ಯಶಸ್ಸಿನ ಉತ್ತುಂಗ ತಲುಪಿ ಕನ್ನಡಿಗರಿಗೆ ಮತ್ತಷ್ಟು ಹೆಮ್ಮ ಮೂಡಿಸಲಿ. Take a bow mate!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ