ತುಮಮೂರು: ಕರ್ನಾಟಕ ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆ ತುಮಕೂರು ತಲುಪಿದೆ. ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ರಾಹುಲ್ ಗಾಂಧಿಯವರು (Rahul Gandhi) ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ಮತ್ತು ತಾವು ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆಸಿದ ಪಾದಯಾತ್ರೆಗಳ ಕಡೆ ಜನರ ಗಮನ ಸೆಳೆದರು. ರಾಹುಲ್ ಗಾಂಧಿಯವರ ಯಾತ್ರೆ ಕಾಶ್ಮೀರ ತಲುಪಿದ ಬಳಿಕ ಅಲ್ಲೊಂದು ಸಭೆ ನಡೆಯುತ್ತದೆ ಅದರಲ್ಲಿ ಭಾಗವಹಿಸಲು ತಾವು ಮತ್ತು ಸಿದ್ದರಾಮಯ್ಯ (Siddaramaiah) ಜನೆವರು 30 ರಂದು ಹೋಗಲಿರುವುದಾಗಿ ಶಿವಕುಮಾರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ