ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ-ಸಿದ್ದರಾಮಯ್ಯ ಸಹೋದರ
‘ನಮ್ಮ ಅಣ್ಣನಿಗೆ ಆಸ್ತಿ ಆಸೆ ಇಲ್ಲ, ನಮ್ಮ ಅಪ್ಪನ ಜಮೀನೇ ಸಾಕಷ್ಟಿದೆ. ನಮ್ಮ ಅಪ್ಪನ ಜಮೀನನ್ನೇ ನಾವು ಭಾಗ ತೆಗೆದುಕೊಂಡಿದ್ದೇವೆ. ಅದನ್ನು ಹೊರತುಪಡಿಸಿ ಊರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ನಮ್ಮಣ್ಣ ರಾಜೀನಾಮೆ ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದೇಗೌಡ ಅವರು ಹೇಳಿದ್ದಾರೆ.
ಮೈಸೂರು, ಅ.01: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಎಫ್ಐಆರ್ ದಾಖಲು ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸಹೋದರ ಸಿದ್ದೇಗೌಡ, ‘ರಾಜಕಾರಣದಲ್ಲಿ ಇಷ್ಟು ವರ್ಷದಿಂದ ನಮ್ಮ ಅಣ್ಣ ತಪ್ಪಿನಲ್ಲಿ ಸಿಲುಕಿಲ್ಲ. ಇದರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಡಾ ವಿಚಾರ ನನಗೆ ಅಷ್ಟಾಗಿ ಗೊತ್ತಿಲ್ಲ. ಆದ್ರೆ, ಸೈಟ್ ವಿಚಾರ ಅತ್ತಿಗೆಗೆ ಗೊತ್ತಿರಬಹುದು, ಗೊತ್ತಿತ್ತು ಅಂತಾನೂ ಹೇಳಲ್ಲ. ಸೈಟ್ ವಿಚಾರ ನಮ್ಮ ಅಣ್ಣನಿಗೆ ಗೊತ್ತಿಲ್ಲ ಅನಿಸುತ್ತೆ. ಇದೀಗ ಸೈಟ್ ವಾಪಸ್ ಕೊಡಲಾಗಿದೆ. ಸೈಟ್ ಕೊಟ್ಟ ಮೇಲೆ ರಾಜೀನಾಮೆ ಯಾಕೆ ಕೊಡಬೇಕು?. ಇನ್ನು ಯಡಿಯೂರಪ್ಪ ಪುತ್ರ ಹಾಗೂ ಹೆಚ್ಡಿ ಕುಮಾರಸ್ವಾಮಿ ಅವರಿಂದ ಈ ಕಳಂಕ ಬಂದಿದ್ದು, ಹೇಗಾದ್ರೂ ಮಾಡಿ ಸಿಎಂರನ್ನ ಕೆಳಗಿಳಿಸಬೇಕೆಂದು ಹೀಗೆ ಮಾಡ್ತಿದ್ದಾರೆ ಎಂದಿದ್ದಾರೆ.
ಇನ್ನು ನಮ್ಮ ಅಣ್ಣನಿಗೆ ಆಸ್ತಿ ಆಸೆ ಇಲ್ಲ, ನಮ್ಮ ಅಪ್ಪನ ಜಮೀನೇ ಸಾಕಷ್ಟಿದೆ. ನಮ್ಮ ಅಪ್ಪನ ಜಮೀನನ್ನೇ ನಾವು ಭಾಗ ತೆಗೆದುಕೊಂಡಿದ್ದೇವೆ. ಅದನ್ನು ಹೊರತುಪಡಿಸಿ ಊರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ನಮ್ಮ ಅತ್ತಿಗೆಗೆ ಸೈಟ್ ಬಂದಿರುವ ವಿಚಾರ ಕೂಡ ನಮಗೆ ಗೊತ್ತಿಲ್ಲ. ನಮ್ಮಣ್ಣ ರಾಜೀನಾಮೆ ಕೊಡಬಾರದು ಎಂದು ಸಿದ್ದೇಗೌಡ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ