ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಧರಣಿಯಲ್ಲಿ ಸಿದ್ದರಾಮಯ್ಯ, ಲಕ್ಷ್ಮಣ ಸವದಿಯನ್ನು ಪಕ್ಕ ಕೂರಿಸಿಕೊಂಡರು!

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಧರಣಿಯಲ್ಲಿ ಸಿದ್ದರಾಮಯ್ಯ, ಲಕ್ಷ್ಮಣ ಸವದಿಯನ್ನು ಪಕ್ಕ ಕೂರಿಸಿಕೊಂಡರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 07, 2024 | 2:16 PM

ಜಗದೀಶ್ ಶೆಟ್ಟರ್ ಎಪಿಸೋಡ್ ಬಳಿಕ ಎಲ್ಲರ ದೃಷ್ಟಿ ಸವದಿ ಮೇಲಿದೆ. ಆಫ್ ಕೋರ್ಸ್ ನಿನ್ನೆ ದೆಹಲಿಯಲ್ಲೇ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದರು. ಬಿಜೆಪಿ ನಾಯಕರು ಗಾಳ ಹಾಕುತ್ತಿರುವ ಕಾರಣಕ್ಕೆ ಸವದಿಯನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮ ಹತ್ತಿರದಲ್ಲೇ ಕೂರಿಸಿಕೊಂಡಿದ್ದರೆ ಆಶ್ಚರ್ಯವಿಲ್ಲ.

ದೆಹಲಿ: ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ವಿರುದ್ಧ ಕಾಂಗ್ರೆಸ್ ನಾಯಕರ (Congress leaders) ಮಾಡುತ್ತಿರುವ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ವಿಶಾಲವಾಗಿ ಹಾಕಿರುವ ಪೆಂಡಾಲ್ ನಲ್ಲಿ ಸೇರಿರುವ ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸರಿಯಾಗಿ ಅನುದಾನ ನೀಡದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಒಂದೇ ಒಂದು ಪೈಸೆ ಬರ ಪರಿಹಾರ ನಿಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂದು ಅವರು ಕೂಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಅವರು ಮುಂಭಾಗದಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯ ಬಲಭಾಗದಲ್ಲಿ ಲಕ್ಷ್ಮಣ ಸವದಿ, ಹೆಚ್ ಕೆ ಪಾಟೀಲ್, ಕೆ ಹೆಚ್ ಮುನಿಯಪ್ಪ, ಮತ್ತು ಹೆಚ್ ಸಿ ಮಹಾದೇವಪ್ಪ ಕಾಣಿಸುತ್ತಾರೆ.

ಹಾಗೆಯೇ ಎಡಭಾಗದಲ್ಲಿ ಡಿಕೆ ಶಿವಕುಮಾರ್, ಬಸವರಾಜ ರಾಯರೆಡ್ಡಿ, ಗೋವಿಂದರಾಜು ಮೊದಲಾದವರಿದ್ದಾರೆ. ಸವದಿ ಅವರು ಸಿದ್ದರಾಮಯ್ಯ ಪಕ್ಕದಲ್ಲೇ ಕುಳಿತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಬಿಡಿ, ಇದು ಕಾಂಗ್ರೆಸ್ ನಾಯಕರ ಪ್ರತಿಭಟನೆ ಯಾರು ಎಲ್ಲಿ ಕುಳಿತರೂ ಅವರು ಕಾಂಗ್ರೆಸ್ ನಾಯಕರೇ. ಆದರೆ, ಜಗದೀಶ್ ಶೆಟ್ಟರ್ ಎಪಿಸೋಡ್ ಬಳಿಕ ಎಲ್ಲರ ದೃಷ್ಟಿ ಸವದಿ ಮೇಲಿದೆ. ಆಫ್ ಕೋರ್ಸ್ ನಿನ್ನೆ ದೆಹಲಿಯಲ್ಲೇ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದರು. ಬಿಜೆಪಿ ನಾಯಕರು ಗಾಳ ಹಾಕುತ್ತಿರುವ ಕಾರಣಕ್ಕೆ ಸವದಿಯನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮ ಹತ್ತಿರದಲ್ಲೇ ಕೂರಿಸಿಕೊಂಡಿದ್ದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ