ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಿದ ಸಿದ್ದರಾಮಯ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ: ಜಿಟಿ ದೇವೇಗೌಡ
ಬೆಂಗಳೂರಲ್ಲಿ ರೈತ ಮತ್ತು ವಿವಿಧ ಸಂಘಟನೆಗಳು ಶಾಂತಿಯುತವಾಗಿ ಬಂದ್ ಆಚರಿಸುತ್ತಿದ್ದಾಗ 144 ಸೆಕ್ಷನ್ ಹೇರಿ ರೈತರನ್ನು ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದ ಅವರ ಮೇಲೆ ಗೋಲಿಬಾರ್ ನಡೆಸಿದ್ದ ಸರಕಾರ ಬಿದ್ದು ಹೋಗಿತ್ತು. ಈವತ್ತು ಈ ಸರ್ಕಾರ 144 ಸೆಕ್ಷನ್ ಹೇರಿ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿದೆ, ಈ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ದೇವೇಗೌಡ ಹೇಳಿದರು.
ಕಲಬುರಗಿ: ನಗರದಲ್ಲಿಂದು ಜೆಡಿಎಸ್ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡುವಾಗ ಕಾವೇರಿ ನದಿ ನೀರು ಬಿಕ್ಕಟನ್ನು ಪ್ರಸ್ತಾಪಿಸಿದ ಪಕ್ಷದ ಹಿರಿಯ ನಾಯಕ ಜಿಟಿ ದೇವೇಗೌಡ (GT Devegowda), ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ತಹೋಗಿ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ (Gajendra Singh Shekhawat) ಅವರಿಗೆ ಒಂದು ಹನಿ ನೀರು ಕೂಡ ಬಿಡಲು ಸಾಧ್ಯವಾಗದು ಅಂತ ಹೇಳಿ ಬೆಂಗಳೂರಿಗೆ ವಾಪಸ್ಸು ಬಂದು ಸಂಪುಟ ಸಭೆಯೊಂದನ್ನು ನಡೆಸಿ 3,500 ಕ್ಯೂಸೆಕ್ಸ್ ನೀರು ಬಿಡುವ ನಿರ್ಧಾರ ತೆಗೆದುಕೊಂಡರು. ಇಂಥ ಇಬ್ಬಂದಿತನ ಯಾಕೆ? ಇಂದು ಬೆಂಗಳೂರಲ್ಲಿ ರೈತ ಮತ್ತು ವಿವಿಧ ಸಂಘಟನೆಗಳು ಶಾಂತಿಯುತವಾಗಿ ಬಂದ್ ಆಚರಿಸುತ್ತಿದ್ದಾಗ 144 ಸೆಕ್ಷನ್ ಹೇರಿ ರೈತರನ್ನು ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದ ಅವರ ಮೇಲೆ ಗೋಲಿಬಾರ್ ನಡೆಸಿದ್ದ ಸರಕಾರ ಬಿದ್ದು ಹೋಗಿತ್ತು. ಈವತ್ತು ಈ ಸರ್ಕಾರ 144 ಸೆಕ್ಷನ್ ಹೇರಿ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿದೆ, ಈ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ದೇವೇಗೌಡ ಹೇಳಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡದ ರೈತರನ್ನು ಬಂಧಿಸುವ ಈ ಸರ್ಕಾರಕ್ಕೆ ಏನು ಹೇಳಬೇಕು ಅಂತ ದೇವೇಗೌಡ ತಿವಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ