ಅತಿಹೆಚ್ಚು ಭ್ರಷ್ಟಾಚಾರ ಮತ್ತು ಬೇಲೆಯೇರಿಕೆಯ ದಾಖಲೆಯನ್ನು ಸಿದ್ದರಾಮಯ್ಯ ಸರ್ಕಾರ ಸ್ಥಾಪಿಸಿದೆ: ಸಿಟಿ ರವಿ
ಅತಿಹೆಚ್ಚು ಸರ್ಕಾರೀ ನೌಕರರು ಸಾವಿಗೆ ಶರಣಾಗಿರುವ ದಾಖಲೆಯೂ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸಂಭವಿಸಿದೆ ಎಂದು ಹೇಳಿದ ರವಿ, ಬಿಜೆಪಿ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಒಳಜಗಳ ಮತ್ತು ರಾಜ್ಯಾಧ್ಯಕ್ಷನನ್ನು ಬದಲಾಯಿಸಲು ಅಗುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಪಕ್ಷದ ಆಂತರಿಕ ವಿಷಯಗಳ ಬಗ್ಗೆ ತಾನು ಕಾಮೆಂಟ್ ಮಾಡಲ್ಲ ಎಂದು ರವಿ ಹೇಳಿದರು.
ದೆಹಲಿ: ಸಿಎಂ ಬದಲಾಗಬೇಕು ಅಂತ ಬಿಜೆಪಿಯವರೇನು ಪ್ರಯತ್ನ ನಡೆಸುತ್ತಿಲ್ಲ ಕಾಂಗ್ರೆಸ್ ಪಕ್ಷದವರೇ ಅದರಲ್ಲಿ ಮಗ್ನರಾಗಿದ್ದಾರೆ, ಸಿದರಾಮಯ್ಯಮನವರು ಹತ್ತು ವರ್ಷ ಸಿಎಂ ಆಗಿರುತ್ತಾರೋ ಅಥವಾ 20 ವರ್ಷವೋ ಅದು ಕಾಂಗ್ರೆಸ್ ಗೆ ಸಂಬಂಧಿಸಿದ ವಿಷಯ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು. ಸಿದ್ದರಾಮಯ್ಯ ಅತಿ ಹೆಚ್ಚು ಅವಧಿಗೆ ಸಿಎಂ ಅಗಿ ದೇವರಾಜ ಅರಸು ಅವರ ದಾಖಲೆ ಮುರಿಯಲಿದ್ದಾರೆ ಅಂತ ಸಚಿವರೊಬ್ಬರು ಹೇಳಿದರವುದಕ್ಕೆ ಪ್ರತಿಕ್ರಿಯಿಸಿದ ರವಿ, ಅದೂ ತನಗೆ ಗೊತ್ತಿಲ್ಲ, ಆದರೆ ಬೆಲೆಯೇರಿಕೆ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ಸಿದ್ದರಾಮಯ್ಯ ಹಿಂದಿನ ಎಲ್ಲ ಸಿಎಂಗಳ ದಾಖಲೆ ಮುರಿಯಲಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರಕ್ಕೆ ಬಂದ ಬಳಿಕ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಬಸ್ ಟಿಕೆಟ್ ದರ ಮೊದಲಾದವು ಸೇರಿದಂತೆ ಒಟ್ಟು 16 ಆಯಾಮಗಳ ದರಗಳು ದುಪ್ಪಟ್ಟಾಗಿವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅವಾಚ್ಯ ಶಬ್ಧ ಬಳಕೆ ಕೇಸ್: ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ ಸಿಟಿ ರವಿ ಕೋರ್ಟ್ ಬಿಗ್ ಶಾಕ್!